ನವದೆಹಲಿ: ಮನೆಯಲ್ಲೇ ಕುಳಿತು ಹಣ ಸಂಪಾದಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಚಿಂತೆ ಬಿಡಿ ಕೇಂದ್ರ ಸರ್ಕಾರ ನಿಮ್ಮ ಯೋಚನೆಗೆ ಯೋಜನೆಯೊಂದನ್ನು ತಂದಿದೆ.
ನಿಮಗೆ ಲೋಗೋ ಮಾಡಲು ಅಥವಾ ಟ್ಯಾಗ್ ಲೈನ್ ಕೊಡಲು ಬಂದರೆ ನೀವು 15 ಲಕ್ಷಗಳಿಸಬಹುದು. ಹೌದು My Gov India ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಆಗಸ್ಟ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಹಾಗಾದ್ರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲೋದು ಹೇಗೆ? ಅಂತೀರಾ ಇಲ್ಲಿದೆ ಪುಟ್ಟ ವಿವರ.
ನೀವು ಸ್ಪರ್ಧೆಯಲ್ಲಿ ಭಾಗವಹಿಸಬಹುದು:
ಹಣಕಾಸು ಸೇವಾ ಇಲಾಖೆ, ಹಣಕಾಸು ಸಚಿವಾಲಯ, ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲೋಗೋದ ಡಿಸೈನ್ ನ್ನು ಸೂಚಿಸಲು ಜನರಿಗೆ ಆಹ್ವಾನ ಕೊಟ್ಟಿದೆ.
ನೀವು ಕೊಡುವ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೊವನ್ನು ಡಿಎಫ್‌ನ್ನ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಇದೊಂದು ವರ್ಚುವಲ್ ಸಹಿಯಂತೆ ಇರಬೇಕು, ಇದು ನೆನಪಿಟ್ಟುಕೊಳ್ಳಲು ಮತ್ತು ಉಚ್ಚರಿಸಲು ಸುಲಭವಿರಬೇಕು. ಹೆಸರು, ಟ್ಯಾಗ್‌ಲೈನ್‌ಗಳು ಮತ್ತು ಲೋಗೊ ಈ ಮೂರೂ ರೀತಿಯಲ್ಲಿ ಭಿನ್ನವಾಗಿರಬೇಕು.
ಇದನ್ನೂ ಓದಿ: ಕೌರಿ ಗ್ರಾಮದಲ್ಲಿ ಮಳೆಯ ರುದ್ರ ನರ್ತನ : ಕೊಚ್ಚಿ ಹೋದ ಮೋರಿ, ಬೆಳೆ ನಾಶ
- ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಬೇಕು.
- ನೋಂದಣಿ ನಂತರ, ನೀವು ನಿಮ್ಮ ಎಂಟ್ರಿ ಖಚಿತಪಡಿಸಿಕೊಳ್ಳಬೇಕು.
- ಇಲ್ಲಿ ನೀವು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಕ್ಲಿಕ್ ಮಾಡಬೇಕು.
- ಬಳಿಕ ನೀವು ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ, ನೀವು ಈ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ.
https://www.mygov.in/task/name-tagline-and-logo-contest-development-financial-institution/