Advertisement

ದೇಶವ್ಯಾಪಿ ಏಕರೂಪದ ಬಾಡಿಗೆ ಕಾನೂನು ಜಾರಿ ಸನ್ನಿಹಿತ:  ಸಚಿವ ಸಂಪುಟದ ಒಪ್ಪಿಗೆ

08:02 AM Jun 03, 2021 | Team Udayavani |

ನವದೆಹಲಿ: ಬಹುನಿರೀಕ್ಷಿತ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಯ್ದೆ ಕುರಿತ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಲಾಗಿದೆ. ಈ ಮೂಲಕ, ದೇಶವ್ಯಾಪಿ ಏಕರೂಪ ಬಾಡಿಗೆ ಕಾನೂನುಗಳು ಜಾರಿಯಾಗಲಿವೆ.

Advertisement

ಇದಲ್ಲದೆ, ಬಾಡಿಗೆ ವ್ಯಾಜ್ಯಗಳನ್ನು ನ್ಯಾಯಾಲಯದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲು ಪ್ರತ್ಯೇಕ ನ್ಯಾಯಾಧಿಕರಣ ಸ್ಥಾಪನೆ ಮುಂತಾದ ಅನುಕೂಲಗಳು ಸಿಗಲಿವೆ.

ಸಂಪುಟ ಒಪ್ಪಿಗೆ ನೀಡಿರುವ ಮಾದರಿ ಬಾಡಿಗೆ ಕಾಯ್ದೆಯಿಂದ (ಎಂಟಿಎ) ಸಾಂಸ್ಥಿಕ ಸ್ವರೂಪದಲ್ಲಿರುವ  ಬಾಡಿಗೆ ಮನೆ ಹಾಗೂ ಬಾಡಿಗೆ ವಾಣಿಜ್ಯ ಕಟ್ಟಡಗಳ ವ್ಯವಸ್ಥೆಗೆ ಮಾರುಕಟ್ಟೆ ಸ್ವರೂಪ ನೀಡುವ ಉದ್ದೇಶವಿದೆ.

ಬಹುಮುಖ್ಯವಾಗಿ, ಕಾಯ್ದೆಯಲ್ಲಿ ಬಾಡಿಗೆದಾರರ ಹಾಗೂ ಮನೆ/ಭೂ ಮಾಲೀಕರ ಹಕ್ಕುಗಳನ್ನು ಕಾಯ್ದುಕೊಳ್ಳಲು ಒತ್ತು ನೀಡಲಾಗಿದೆ. ಇಬ್ಬರಿಗೂ ತಮ್ಮ ಹಕ್ಕುಗಳನ್ನು ಚಲಾಯಿಸಲು ಸಮಾನ ಅಧಿಕಾರ ನೀಡಲಾಗಿದೆ. ಆದರೆ, ಹಕ್ಕುಗಳ ಹೆಸರಿನಲ್ಲಿ ಉಂಟಾಗಬಹುದಾದ ವ್ಯಾಜ್ಯಗಳನ್ನು ಅಂದಾಜು ಮಾಡಿ ಅವುಗಳಿಗೂ ವಿಚಾರಣೆ ಮಾರ್ಗ ಹಾಗೂ ಪರಿಹಾರೋಪಾಯಗಳನ್ನು ನೀಡಲಾಗಿದೆ.

ಸಂಪುಟದ ಇತರ ನಿರ್ಧಾರಗಳು: 2019ರಲ್ಲಿ ರೂಪಿತವಾಗಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ವತಿಯಿಂದ ಹೊಸದಾಗಿ ರೂಪುಗೊಂಡಿರುವ ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ಪೂರ್ವಾನುಮತಿ ರೂಪದ ಒಪ್ಪಿಗೆ ನೀಡಲಾಗಿದೆ.ಈ ಒಕ್ಕೂಟದಲ್ಲಿ ಭಾರತ, ಕಜಕಿಸ್ತಾನ, ಚೀನಾ, ಕಿರ್ಗಿಸ್‌ ರಿಪಬ್ಲಿಕ್‌, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ ಹಾಗೂ ಉಜ್ಬೇಕಿಸ್ತಾನ ರಾಷ್ಟ್ರಗಳು ಸದಸ್ಯತ್ವ ಹೊಂದಿದ್ದು ಈ ದೇಶಗಳ ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸುದ್ದಿಸಂಸ್ಥೆಗಳು,  ಸುದ್ದಿ ಮಾಧ್ಯಮಗಳ ನಡುವೆ ಪರಸ್ಪರ ಸಹಕಾರದ ಆಶಯವನ್ನು ಹೊಸ ಒಪ್ಪಂದ ಹೊಂದಿದೆ. ಇದೇ  ವೇಳೆ, ಭಾರತ ಮತ್ತು ಜಪಾನ್‌ ಸಹಭಾಗಿತ್ವದಲ್ಲಿಸುಸ್ಥಿರ ನಗರಾಭಿವೃದ್ಧಿ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು, ಆ ಮೂಲಕ ನಗರಗಳಲ್ಲಿ ಹೆಚ್ಚಿನ ಉದ್ಯೋಗವಕಾಶವನ್ನು ನಿರೀಕ್ಷಿಸಲಾಗಿದೆ.

Advertisement

ಪ್ರಮುಖಅಂಶಗಳು

ಬಾಡಿಗೆದಾರರು ಮಾಲೀಕರ ನಡುವೆ ಸಿದ್ಧವಾಗುವ ಬಾಡಿಗೆಕರಾರು ಪತ್ರವನ್ನು ನೋಂದಾಯಿಸಬೇಕು.

ಪ್ರತಿ ರಾಜ್ಯ ಅಥವಾಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಡಿಗೆ ನಿಯಂತ್ರಣಕ್ಕಾಗಿ ಪ್ರಾಧಿಕಾರ ರಚಿಸಬೇಕು. ಬಾಡಿಗೆ ಕುರಿತ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಪ್ರತ್ಯೇಕ ನ್ಯಾಯಾಧಿಕರಣ ರಚಿಸಬೇಕು.

ಮನೆ ಮಾಲೀಕರು/ಭೂ ಮಾಲೀಕರು ನಿಗದಿಪಡಿಸುವ ಮಾಸಿಕ ಬಾಡಿಗೆಗೆ ಅನುಗುಣವಾಗಿ ಮುಂಗಡ ಹಣ (ಅಡ್ವಾನ್ಸ್‌) ಪಡೆಯಬಹುದು. ವಾಸದ ಮನೆಯಾದರೆ, ಎರಡು ತಿಂಗಳ ಬಾಡಿಗೆಯನ್ನು ಅಥವಾ ವಾಣಿಜ್ಯ ಮಳಿಗೆಯಾದರೆ ಆರು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಬಹುದು.

ಅತಿ ಮುಖ್ಯ ಅಂಶವೇನೆಂದರೆ, ಬಾಡಿಗೆಕರಾರಿನಲ್ಲಿ ಇರುವಂತೆ ಅವಧಿ ಮುಗಿದ ಮೇಲೆ ಸಹಜವಾಗಿ ಬಾಡಿಗೆದಾರರು ಮನೆ ಖಾಲಿ ಮಾಡಬೇಕು. ಅವಧಿಗೂ ಮುನ್ನ ಮನೆ ಖಾಲಿ ಮಾಡಿಸಬೇಕಿದ್ದರೆ ಮಾಲೀಕರು 3 ತಿಂಗಳ ಮೊದಲೇ ನೋಟಿಸ್‌ ನೀಡಬೇಕು. ಹಾಗೊಂದು ವೇಳೆ, ನೋಟಿಸ್‌ ಬಂದರೂ ಮನೆ ಬಿಡದೇ ಇದ್ದರೆ ಅಥ ವಾಕರಾರಿನ ಅವಧಿ ಮುಗಿದ ನಂತರವೂ ಮನೆ ಬಿಡದೇ ಇದ್ದರೆ, ಮನೆ ಮಾಲೀಕರುಕರಾರು ಮುಗಿದ ಮರು ತಿಂಗಳಿನಿಂದ ಮನೆ ಖಾಲಿಯಾಗುವವರೆಗಿನ ಅವಧಿಯವರೆಗೆ ಪ್ರತಿ ತಿಂಗಳ ಬಾಡಿಗೆಯ ಎರಡು ಪಟ್ಟು ಹಣವನ್ನು ಪ್ರತಿ ತಿಂಗಳೂ ವಸೂಲಿ ಮಾಡಬಹುದು.

ವಿಶೇಷ ಸಂದರ್ಭಗಳಲ್ಲಿ, ಮನೆ ಮಾಲೀಕರು/ಆಸ್ತಿಯ ನಿರ್ವಹಣಾಗಾರರು ಬಾಡಿಗೆದಾರರಿಗೆ ಲಿಖೀತ ನೋಟಿಸ್‌ ಅಥವಾ ವಿದ್ಯುನ್ಮಾನ ಮಾದರಿಯ ನೋಟಿಸ್‌ ಅನ್ನು ನೀಡಿ  ಬಾಡಿಗೆ ನೀಡಲಾಗಿರುವ ಪ್ರದೇಶಕ್ಕೆ ತೆರಳಬಹುದು. ಆದರೆ, ಹಾಗೆ ಭೇಟಿ ನೀಡುವುದಕ್ಕೆ 24 ಗಂಟೆಗಳ ಮುನ್ನ ನೋಟಿಸ್ ನೀಡುವುದು ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next