Advertisement

ಸೋಂಕು ಶಮನಕ್ಕೆ ವ್ಯಾಯಾಮ ಮಾಡಿ: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದ ಸಲಹೆ

10:25 AM Apr 01, 2020 | Hari Prasad |

ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಹಿರಿಯ ನಾಗರಿಕರಿಕರಿಗಾಗಿ ಸೋಮವಾರ ವಿಶೇಷ ಸಲಹೆಗಳನ್ನು ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಸೋಂಕಿನ ಪರಿಸ್ಥಿತಿ ವ್ಯಾಪಕವಾಗಿರುವುದರಿಂದ ಅದು ಮಹತ್ವದ್ದೆನಿಸಲಿದೆ.  ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹಾಗೂ ಕೆಲವರಿಗೆ ಮಧುಮೇಹ, ಹೈಪರ್‌ ಟೆನ್ಶನ್‌, ಮೂತ್ರಕೋಶ ಸಮಸ್ಯೆ, ಶ್ವಾಸಕೋಶದ ಸಮಸ್ಯೆಗಳು ಇರುವ ಕಾರಣ, ಸೋಂಕು ಬೇಗನೆ ಬಾಧಿಸುತ್ತದೆ. ಹೀಗಾಗಿ, ಈ ಸಲಹೆಗಳು ಪ್ರಮುಖವಾಗಿವೆ

Advertisement

ಏನನ್ನು ಮಾಡಬೇಕು?
– ನಿಯಮಿತ ವ್ಯಾಯಾಮ

– ವೈದ್ಯರು ಸೂಚಿಸಿದ ಔಷಧಿ ತಪ್ಪದೇ ಸೇವನೆ

– ಕಣ್ಣಿನ ಪೊರೆ, ಮೊಣಕಾಲು ಮುಂತಾದ ಆಯ್ಕೆಯ ಶಸ್ತ್ರಚಿಕಿತ್ಸೆಯ ದಿನಾಂಕ ಮುಂದೂಡಿಕೆ

– ಪದೇ ಪದೆ ಮುಟ್ಟುವಂಥ ಮೇಲ್ಮೈಗಳನ್ನು ಸೋಂಕು ನಿವಾರಕಗಳ ಮೂಲಕ ಸ್ವಚ್ಛಗೊಳಿಸುವಿಕೆ

Advertisement

– ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು

– ಮನೆಯಲ್ಲೇ ತಯಾರಿಸಿದ ಪೌಷ್ಟಿಕಾಂಶಯುಕ್ತ ಬಿಸಿ ಹಾಗೂ ತಾಜಾ ಆಹಾರ ಸೇವನೆ

– ಆಗಾಗ  ನೀರು ಕುಡಿಯುವುದು

– ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಹಣ್ಣಿನ ಜ್ಯೂಸ್‌ ಸೇವನೆ


ಏನು ಮಾಡಬಾರದು?

– ಮುಖಕ್ಕೆ ಕರವಸ್ತ್ರ ಅಡ್ಡ ಹಿಡಿಯದೇ ಸೀನುವುದು ಅಥವಾ ಕೆಮ್ಮುವುದು

– ಜ್ವರ, ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳ ಸಮೀಪಕ್ಕೆ ಹೋಗುವುದು

– ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು

– ಪಾರ್ಕ್‌, ಧಾರ್ಮಿಕ ಕೇಂದ್ರಗಳು, ಮಾರುಕಟ್ಟೆ ಮುಂತಾದ ಸ್ಥಳಕ್ಕೆ ಹೋಗುವುದು

Advertisement

Udayavani is now on Telegram. Click here to join our channel and stay updated with the latest news.

Next