Advertisement

Central Government; ಬೆಳಗ್ಗೆ 9.15ಕ್ಕೆ ಕಚೇರಿಗೆ ಬರದಿದ್ದರೆ ಅರ್ಧದಿನ ಸಿ.ಎಲ್‌. ಕಡಿತ

01:15 AM Jun 23, 2024 | Team Udayavani |

ಹೊಸದಿಲ್ಲಿ: ಕಚೇರಿಗೆ ತಡವಾಗಿ ಹಾಜರಾಗುವ ಕೇಂದ್ರ ಸರಕಾರಿ ನೌಕರರನ್ನು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆಯು ತರಾಟೆ ತೆಗೆದುಕೊಂಡಿದೆ. ದೇಶಾದ್ಯಂತ ಕೇಂದ್ರ ಸರಕಾರಿ ನೌಕಕರು ಸರಿಯಾಗಿ ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಬೇಕು. ಇಲ್ಲವಾದರೆ ಉದ್ಯೋಗಿಗಳು ಅರ್ಧ ದಿನ ಸಾಮಾನ್ಯ ರಜೆಯನ್ನು (ಸಿ.ಎಲ್‌.) ಕಳೆದುಕೊಳ್ಳಬೇಕಾಗುತ್ತದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಉದ್ಯೋಗಿಗಳೂ ಕೂಡ ಬಯೋಮೆಟ್ರಿಕ್‌ ಬಳಸುವ ಮೂಲಕ ಹಾಜರಾತಿಯನ್ನು ದೃಢಪಡಿಸಬೇಕು ಎಂದು ಸೂಚನೆ ನೀಡಿದೆ. ಇದಲ್ಲದೇ ಉದ್ಯೋಗಿಗಳು ಕಚೇರಿಗೆ ಹಾಜರಾಗಲು ಸಾಧ್ಯವಾಗದೇ ಇದ್ದಾಗ ಮುಂಚಿತವಾಗಿ ಆ ಬಗ್ಗೆ ತಿಳಿಸಿ ಸಾಮಾನ್ಯ ರಜೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದೆ. ಸರಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸುತ್ತವೆ. ಕೆಲವು ಸಿಬಂದಿ ತಡವಾಗಿ ಕಚೇರಿಗೆ ಬಂದು ಬೇಗ ಮನೆಗೆ ಹೋಗುತ್ತಿದ್ದಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next