Advertisement

ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ

04:43 PM Aug 16, 2022 | Team Udayavani |

ಸೇಡಂ: ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಭಾಷಣ ಮಾಡಲು ಮಾತ್ರ ಮೋದಿ ಸೀಮಿತವಾಗಿದ್ದಾರೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ತಾಲೂಕಿನ ಮದಕಲ್‌ನಲ್ಲಿ ಜನ ಜಾಗೃತಿ ಪಾದಯಾತ್ರೆ ವೇಳೆ ಗ್ರಾಮದ 40ಯುವಕರು ವಿವಿಧ ಪಕ್ಷಗಳನ್ನು ಕಾಂಗ್ರೆಸ್‌ ಸೇರ್ಪಡೆ ವೇಳೆ ಮಾತನಾಡಿದ ಅವರು, ಯುವಕರು ನೈಜ ಸತ್ಯ ತಿಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ನೀಡಲಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಶರನರೆಡ್ಡಿ ಪಾಟೀಲ, ಮುಧೋಳ ಬ್ಲಾಕ್‌ ಅಧ್ಯಕ್ಷ ರವೀಂದ್ರ ನಂದಿಗಾಮ, ಬಸವರಾಜ ಪಾಟೀಲ ಊಡಗಿ, ಸತೀಶರೆಡ್ಡಿ ರಂಜೋಳ, ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ಗುರನಾಥರೆಡ್ಡಿ ಪಾಟೀಲ, ಸಂತೋಷ ಮಹಾರಾಜ, ದಾಮೋದರರೆಡ್ಡಿ, ಮಧುಸೂಧನರೆಡ್ಡಿ, ಸುಧಾಕರ ಕುಲಕರ್ಣಿ , ಅಣವೀರಪ್ಪ ದೇಸಾಯಿ, ವೆಂಕಟರೆಡ್ಡಿ, ಸದಾಶಿವರೆಡ್ಡಿ, ರಾಮಯ್ಯ ಪೂಜಾರಿ, ರಾಜಶೇಖರ ಪುರಾಣಿಕ, ರವಿ ಸಾಹು ತಂಬಾಕೆ, ರಾಜು ಗೌಡ, ವಿಶ್ವನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಚಂದ್ರಶೆಟ್ಟಿ ಬಂಗಾರ, ಶರಣಗೌಡ ಪಾಟೀಲ, ಮುರುಳಿಧರ ರೆಡ್ಡಿ, ನಾಗೇಶ ಕಾಳಾ, ಜಗನ್ನಾಥ ಚಿಂತಪಳ್ಳಿ, ಜೈಭೀಮ ಊಡಗಿ, ಸತೀಶ ಪೂಜಾರಿ, ಭೀಮಯ್ಯ ಆಡಕಿ, ಸಿದ್ಧಲಿಂಗರೆಡ್ಡಿ, ಭೀಮರಾವ್‌ ಅಳ್ಳೋಳ್ಳಿ, ಸೈಯದ್‌ ನಾಜಿನೋದ್ದಿನ್‌, ಈರಪ್ಪ ಗುಂಡಗುರ್ತಿ, ಅಶೋಕ ಮಹಾಡಿಕ್‌, ವಿಲಾಸ ಗೌತಮ್‌, ರಾಜು ಹಡಪದ, ಬಸವರಾಜ ಕಾಳಗಿ, ಶ್ರೀಕಾಂತ ಜಾಪನೂರ, ಹಾಜಿ ನಾಡೇಪಲ್ಲಿ, ಮೈನೋದ್ದಿನ ಕಾಳಗಿ, ಯುನೂಸ್‌ ಸವೇರಾ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next