Advertisement

ಬಾಡಿಗೆ ತಾಯ್ತನ ವಿಧೇಯಕಕ್ಕೆ ಅಸ್ತು

10:59 AM Feb 27, 2020 | Hari Prasad |

ಹೊಸದಿಲ್ಲಿ: ಬಾಡಿಗೆ ತಾಯಿಯಾಗಲು ಇಚ್ಛಿಸುವ ಯಾವುದೇ ಮಹಿಳೆಗೂ ಅಂಥ ಅವಕಾಶ ವನ್ನು ಕಲ್ಪಿಸುವ ಮತ್ತು ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರು ಕೂಡ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡುವಂಥ ಬಾಡಿಗೆ ತಾಯ್ತನ ವಿಧೇಯಕ 2020ಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಸಿಕ್ಕಿದೆ.

Advertisement

ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿದೆ. ರಾಜ್ಯ ಸಭೆಯ ಆಯ್ಕೆ ಸಮಿತಿ ಶಿಫಾರಸು ಮಾಡಿರುವ ಎಲ್ಲ ಅಂಶಗಳನ್ನೂ ಈ ವಿಧೇಯಕ ಒಳಗೊಂಡಿದೆ. ಶಿಫಾರಸಿನಂತೆಯೇ, ವಾಣಿಜ್ಯಿಕ ಬಾಡಿಗೆ ತಾಯ್ತನಕ್ಕೆ ನಿಷೇಧ ಹೇರಲಾಗಿದೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಭಾರತೀಯ ದಂಪತಿಗಳು (ಪತಿ-ಪತ್ನಿ ಇಬ್ಬರೂ ಭಾರತ ಮೂಲದವರಾಗಿದ್ದರೆ) ದೇಶದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಹುದು ಎಂದೂ ವಿಧೇಯಕದಲ್ಲಿದೆ. ಇದೇ ವೇಳೆ, 1,480 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್‌ ರಚನೆಗೂ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ನಾಲ್ಕು ವರ್ಷಗಳೊಳಗಾಗಿ ಇದು ಜಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next