Advertisement
ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗ ಬಂದಿದ್ದ ಕಾರಣ ಇಲ್ಲಿಯೇ ಸುದ್ದಿಗೋಷ್ಟಿ ಮಾಡುತ್ತಿದ್ದೇನೆ ಎಂದರು.
Related Articles
ಈ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 38,169 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ ಎಂದರು.
Advertisement
ಗ್ರಾಮೀಣ ಜನರಿಗೆ ಉದ್ಯೋಗ ಕೊಡಬೇಕಾದರೆ ನರೇಗಾ ಅನುದಾನ ಹೆಚ್ಚು ಮಾಡಬೇಕಿತ್ತು.ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ ಕೇವಲ 80 ಕೋಟಿ ಅಷ್ಟೇ ಹೆಚ್ಚು ಮಾಡಿದ್ದಾರೆ. ಅಹಾರ ಮತ್ತು ನಾಗರೀಕ ಸರಬರಾಜು ಕ್ಷೇತ್ರ ಸಬ್ಸಿಡಿ 79638 ಕೋಟಿ ಕಡಿಮೆಯಾಗಿದೆ.ಫುಡ್ ಸಬ್ಸಿಡಿ ಕಡಿಮೆ ಮಾಡಿದ್ದಾರೆ.ಇದು ಉಚಿತ ಅಕ್ಕಿ ಮೇಲೆ ಪರಿಣಾಮ ಬೀರಲಿದೆ ಎಂದರು.
ಜಿಡಿಪಿ 46 ಪರ್ಸೆಂಟ್ ಮಹನೋನ್ ಸಿಂಗ್ ಕಾಲದಲ್ಲಿ ಇದ್ದರೆ ಈವಾಗ 62 ಪರ್ಸೆಂಟ್ ಆಗಿದೆ.ನರೇಂದ್ರ ಮೋದಿ ಕಾಲ ಸುಭೀಕ್ಷವಾಗಿದೆ ಅನ್ನುವುದು ಸುಳ್ಳು ಎಂದರು.
ಉನ್ನತ ಶಿಕ್ಷಣಕ್ಕೆ ನ್ಯಾಷನಲ್ ಎಜುಕೇಶನಲ್ ಪಾಲಿಸಿ ಬೇರೆ ತಂದಿದ್ದಾರೆ.4779 ಕೋಟಿ ರೂಪಾಯಿ ಗಳನ್ನ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಾಡಿದ್ದಾರೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ ಎಂದರು.
35 ಸಾವಿರ ಕೋಟಿ ರೂಪಾಯಿ ಗೊಬ್ಬರದ ಸಬ್ಸಿಡಿ ಕಡಿಮೆಯಾಗಿದೆ. ಮುಂದೆ ಗೊಬ್ಬರದ ಬೆಲೆ ಏರಿಕೆಯಾಗಲಿದೆ ಎಂದು ವಿವರವಾಗಿ ಬಜೆಟ್ ಕುರಿತಾಗಿ ಅಸಮಾಧಾನ ಹೊರ ಹಾಕಿದರು.