Advertisement

ಕೇಂದ್ರ ಬಜೆಟ್ ಅಭಿವೃದ್ಧಿಯ ದಿಕ್ಸೂಚಿ

11:27 AM Feb 03, 2019 | |

ಯಲಬುರ್ಗಾ: ಕೇಂದ್ರ ಸರ್ಕಾರದ ಬಜೆಟ್ ದೇಶದ ಸಮಗ್ರ ಅಭಿವೃದ್ಧಿಯ ದಿಕ್ಸೂಚಿಯಾಗಿದ್ದು, ಇದೊಂದು ಜನಸಾಮಾನ್ಯರ ಪರವಾದ ಬಜೆಟ್ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

Advertisement

ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕ ವತಿಯಿಂದ ಶನಿವಾರ ಹಮ್ಮಿಕೊಂಡ ಬಜೆಟ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಜೆಟ್ನಿಂದ ದೇಶದ ಆರ್ಥಿಕ ಸ್ಥಿತಿ ಶಿಸ್ತಿನಿಂದ ಕೂಡಿದೆ. ಇದಕ್ಕೆ ಭ್ರಷ್ಟಾಚಾರ ಮುಕ್ತ ಆಡಳಿತ, ಬ್ಯಾಂಕ್‌ಗಳಲ್ಲಿ ಸುಧಾರಣೆಯಿಂದಾಗಿ, ಸ್ಥಿರ ಸರಕಾರದಿಂದಾಗಿ ಸಾಧ್ಯವಾಗಿದೆ ಎಂದಿದ್ದಾರೆ.

ಪ್ರಸಕ್ತ ವರ್ಷದ ಆಯವ್ಯಯವು ದೂರದರ್ಶಿತ್ವದ್ದಾಗಿದ್ದು ಪ್ರತಿ ವರ್ಷ ರೈತರ ಖಾತೆಗಳಿಗೆ ನೇರವಾಗಿ 6000 ರೂ. ಗಳನ್ನು ಕೃಷಿ ಸಮ್ಮಾನ ನಿಧಿಯಿಂದ ಪಾವತಿ, ಅಂಗನವಾಡಿ ಕಾರ್ಯಕರ್ತೆಯರ ವೇತನದಲ್ಲಿ ಶೇ. 50 ಹೆಚ್ಚಳ, ಕಾರ್ಮಿಕ ವರ್ಗಕ್ಕೆ ವಿಶೇಷ ಸವಲತ್ತು, ಗ್ರ್ಯಾಜುಟಿ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ, ಮೃತಪಟ್ಟರೆ 6 ಲಕ್ಷದ ನೆರವು, ನಿವೃತ್ತಿ ವೇತನ 3000 ರೂ. ನೀಡುವುದು. ಸೈನಿಕರಿಗೆ ಒಆರ್‌, ಒಪಿ ಜಾರಿ ಹಾಗೂ ವೇತನದಲ್ಲಿ ಹೆಚ್ಚಳವಾಗಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿರುವರು. ನರೇಗಾ, ಸ್ವಚ್ಛ ಭಾರತ, ಡಿಜಿಟಲ್‌ ಇಂಡಿಯಾ, ರೈಲ್ವೆ, ಉಜ್ವಲ್‌ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ದೇಶವನ್ನು ಸರ್ವತೋಮುಖವಾಗಿ ಅಭಿವೃದ್ಧಿಯತ್ತ ಒಯ್ಯಲು ಕೇಂದ್ರ ಸರ್ಕಾರ ದಿಟ್ಟ ಕ್ರಮಕೈಗೊಂಡಿದೆ ಎಂದರು.

ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ.ಎಚ್. ಪೊಲೀಸಪಾಟೀಲ, ಶಿವನಗೌಡ್ರ ಬನಪ್ಪಗೌಡ್ರ, ಶರಣಪ್ಪ ಬಣ್ಣದಬಾವಿ, ಶಿವಕುಮಾರ ನಾಗಲಾಪುಮಠ, ತಾಪಂ ಸದಸ್ಯರಾದ ಶರಣಪ್ಪ ಈಳಗೇರ, ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಸುರೇಶಗೌಡ ಶಿವನಗೌಡ್ರ, ಮುಖಂಡರಾದ ಸಿದ್ರಾಮೇಶ ಬೇಲೇರಿ, ಮಲ್ಲಣ್ಣ ನರೇಗಲ್ಲ, ನೀಲನಗೌಡ ತಳುಗೇರಿ, ಮಾರುತಿ ಗಾವರಾಳ, ಮಂಜುನಾಥ ಗಟ್ಟೆಪ್ಪನವರ, ಸಂಗಪ್ಪ ರಾಮತಾಳ, ಪ್ರಕಾಶ ತಹಶೀಲ್ದಾರ್‌, ನಾಗರಾಜ ತಲ್ಲೂರು, ಸುರೇಶ ಹೊಸಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next