Advertisement

ಸಲಿಂಗ ದಂಪತಿ ಬಾಡಿಗೆ ತಾಯ್ತನದ ಸೇವೆಗೆ ಅರ್ಹರಲ್ಲ: ಸುಪ್ರೀಂಗೆ ಕೇಂದ್ರ

11:43 PM May 09, 2023 | Team Udayavani |

ಹೊಸದಿಲ್ಲಿ: ಸಲಿಂಗ ದಂಪತಿಗಳು ಹಾಗೂ ಸಹಜೀವನ ನಡೆಸುತ್ತಿರುವ ಜೋಡಿ(ಲಿವ್‌ ಇನ್‌ ಪಾಟ್ನìರ್‌ಗಳು)ಗಳಿಗೆ ಬಾಡಿಗೆ ತಾಯ್ತನದ ಕಾನೂನಿನಡಿ ಸಿಗುವ ಸೇವೆಗಳನ್ನು ಯಾವುದೇ ಕಾರಣಕ್ಕೂ ಒದಗಿಸಬಾರದು ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ಸಲಿಂಗ ವಿವಾಹಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ಕೇಂದ್ರ ಸರಕಾರ ಈ ವಿಚಾರ ತಿಳಿಸಿದೆ. ಸಲಿಂಗ ವಿವಾದ‌ ಅಥವಾ ಸಹ ಜೀವನದ ವಿಚಾರ ಬಂದಾಗ, ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಿದರೆ, ಹುಟ್ಟುವ ಮಗುವಿನ ಸುರಕ್ಷತೆ ಹಾಗೂ ಪಾಲನೆಯು ಪ್ರಶ್ನಾರ್ಹವಾಗಿ ಉಳಿಯುತ್ತದೆ. ಹೀಗಾಗಿ, ಬಾಡಿಗೆ ತಾಯ್ತನ ಕಾನೂನಿನಡಿ ಸಿಗುವ ಸೇವೆಗಳನ್ನು ಇಂಥ ದಂಪತಿಗಳಿಗೆ ಕಲ್ಪಿಸುವಂತಿಲ್ಲ ಎಂದು ಸರಕಾರ ಹೇಳಿದೆ.

ಇದೇ ವೇಳೆ, ವಿವಾಹ ಎಂಬುದರ ಪರಿಕಲ್ಪನೆಯು ಈಗ ವಿಕಸಿತಗೊಂಡಿದೆ. ಅದು ಈಗ ಕೇವಲ “ಶಾಸನಾತ್ಮಕ ಗುರುತಿಸುವಿಕೆ’ಯಾಗಿ ಉಳಿದಿಲ್ಲ, ಬದಲಿಗೆ ವಿವಾಹಕ್ಕೆ ಈಗ “ಸಾಂವಿಧಾನಿಕ ರಕ್ಷಣೆ’ಯೂ ಇದೆ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next