Advertisement
ಸರಕಾರಿ ಮೆಡಿಕಲ್ ಕಾಲೇಜುಗಳ ಸಹಿತ 40ಕ್ಕೂ ಅ ಧಿಕ ಆರೋಗ್ಯ ಕೇಂದ್ರಗಳನ್ನು ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳಾಗಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಕ್ರಮ ಆರಂಭಿಸಿದೆ. ಕಾರ್ಪರೇಟ್ ಆಸ್ಪತ್ರೆಗಳೊಂದಿಗೆ ಹಣಾಹಣಿ ನಡೆಸುವಷ್ಟು ಸರಕಾರಿ ಆಸ್ಪತ್ರೆಗಳು ಈ ಮೂಲಕ ಬದಲಾಗಲಿವೆ. ತಿರುವನಂತಪುರ ಕೋಟ್ಟಯಂ, ತ್ರಿಶೂರು, ಕಲ್ಲಿಕೋಟೆ ಮೆಡಿಕಲ್ ಕಾಲೇಜುಗಳು, ಜಿಲ್ಲಾ , ತಾಲೂಕು ಆಸ್ಪತ್ರೆಗಳೂ ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಅತ್ಯಧುನಿಕ ಚಿಕಿತ್ಸಾ ಕೇಂದ್ರಗಳಾಗಿ ಮಾರ್ಪಡಲಿವೆ. ಈ ಮೂಲಕ ಹೆಚ್ಚುವರಿ ಜನತೆಗೆ ಸರಕಾರಿ ಆಸ್ಪತ್ರೆಗಳ ಸೇವೆ ಲಭಿಸಲಿದೆ ಎಂಬ ನಿರೀಕ್ಷೆ ಮೂಡಿದೆ. ಆಸ್ಪತ್ರೆಗಳ ಆಧುನೀಕರಣ ನಿಟ್ಟಿನಲ್ಲಿ 2 ಸಾವಿರ ಕೋಟಿ ರೂ.ನ ಚಟುವಟಿಕೆಗಳು ಪ್ರಗತಿಯಲ್ಲಿವೆ. ಒಟ್ಟು 4 ಸಾವಿರ ಕೊಟಿ ರೂ. ಬಂಡವಾಳ ನಿರೀಕ್ಷೆಯಿದೆ. ಈ ನಿಕ್ಷೇಪ ಮೂಲಧನ ವೆಚ್ಚಕ್ಕಾಗಿ ಬಳಸಲಾಗುವುದು. ಮುಂದಿನ ವೆಚ್ಚಗಳಿಗೆ ಬಜೆಟ್‌ನಲ್ಲಿ ಘೋಷಿಸಲಾದ ಸಂಪೂರ್ಣ ಸಮಾಜ ಸುರಕ್ಷೆ ಯೋಜನೆಯ ಮೂಲಕ ಲಭಿಸುವ ಆದಾಯವನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಭಾರೀ ವೆಚ್ಚಕ್ಕೆ ಕಾರಣವಾಗುತ್ತಿರುವ ಪಕ್ಷವಾತ, ಕ್ಯಾನ್ಸರ್, ಹೃದ್ರೋಗ ಇತ್ಯಾದಿಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವ ಯತ್ನದಲ್ಲಿ ಸರಕಾರಿ ಆಸ್ಪತ್ರೆಗಳು ಮುನ್ನಡೆಯಲ್ಲಿದೆ. 2014ರಲ್ಲಿ ಶೇ.66 ಮಂದಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳನ್ನು ಆಸ್ರಯಿಸಿದ್ದಾರೆ. ಇನ್ನೂ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಶೇ.85 ಮಂದಿ ಸರಕಾರಿ ಆಸ್ಪತ್ರೆಗಳತ್ತ ಮನಮಾಡುವ ನಿರೀಕ್ಷೆಯಿದೆ.
“ಕಾತ್’ ಪ್ರಯೋಗಾಲ ಯಗಳು ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದ್ದು, ಮುಂದಿನವರ್ಷ ಹೆಚ್ಚುವರಿ ಎರಡು ಪ್ರಯೋಗಾಲ ಯಗಳ ಆರಂಭ ನಡೆಯಲಿವೆ. ಈ ಮೂಲಕ ಇಡುಕ್ಕಿ ಜಿಲ್ಲೆ ಹೊರತು ಪಡಿಸಿ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲೂ ಕಾತ್ ಪ್ರಯೋಗಾಲ ಯಗಳಿವೆು. ಮೆಡಿಕಲ್ ಕಾಲೇಜು ಗಳಲ್ಲೂ, 8 ಜಿಲ್ಲಾ ಆಸ್ಪತ್ರೆಗಳಲ್ಲೂ ಪಕ್ಷವಾತ ಚಿಕಿತ್ಸೆಗೆ ಪರಿಣತ ಸೌಲಭ್ಯಗಳು ಇವೆ.É ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ ಈ ಸೌಕರ್ಯ ಏರ್ಪಡಿಸಲಾಗುವುದು. ಎಲ್ಲ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಈ ವರ್ಷ ಜಾರಿಗೆ ಬರಲಿದೆ.