ನವದೆಹಲಿ : ದೇಶದ ನಾಗರಿಕ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಇದ್ದ ಮಾರ್ಚ್ 31ರ ಗಡುವನ್ನು ಈಗ ಆದಾಯ ತೆರಿಗೆ ವಿಸ್ತರಣೆ ಮಾಡಿದೆ.
ಮೂರು ತಿಂಗಳುಗಳ ತನಕ ವಿಸ್ತರಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ ಬಿಕ್ಕಟ್ಟಿನ ಕಾರಣದಿಂದ ಜೋಡಣೆಯ ಗಡುವನ್ನು ವಿಸ್ತರಣೆ ಮಾಡಿದ್ದು, ಜೂನ್ 30 ರ ತನಕ ವಿಸ್ತರಿಸಿದೆ. ಜೂನ್ 30 ರೊಳಗೆ ಯಾರು ಆಧಾರ್ ಮತ್ತು ಪಾನ್ ಕಾರ್ಡ್ ಗಳ ಜೋಡಣೆ ಮಾಡುವುದಿಲ್ಲವೋ ಅವರು 1000ರೂ. ದಂಡ ಪಾವತಿಸಬೇಕಾಗುತ್ತದೆ ಮತ್ತು ಅವರ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ.
ಓದಿ : ಇಪಿಎಫ್ ಗೂ ತೆರಿಗೆ, ಪಿಂಚಣಿ ನಿಧಿ ಶುಲ್ಕ ಹೆಚ್ಚಳ…ಇಂದಿನಿಂದ ಏನೇನು ಬದಲಾವಣೆ?
ಆಧಾರ್ ಕಾರ್ಡ್ ಹಾಗೂ ಪಾನ್ ಜೋಡಣೆಯ ಕೊನೆಯ ದಿನಾಂಕವಾಗಿದ್ದ ಬುಧವಾರ(ಮಾ.31)ದಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಆಧಾರ್ ಹಾಗೂ ಪಾನ್ ಜೋಡಣೆ ಮಾಡುವ ಸಂದರ್ಭದಲ್ಲಿ ತಾಂತ್ರಿಕ ದೋಷ ಬರುತ್ತಿದೆ ಎಂಬ ಹಲವರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಆಧಾರ್ ಹಾಗೂ ಪಾನ್ ಜೋಡಣೆಯ ಗಡುವನ್ನು ಇಲಾಖೆ ವಿಸ್ತರಣೆ ಮಾಡಿದೆ.
ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷವಿದೆ ಎಂಬ ದೇಶದ ನಾಗರಿಕರ ಆರೋಪದ ಹಿನ್ನಲೆಯಲ್ಲಿ, ಆಧಾರ್ ಹಾಗೂ ಪಾನ್ ಜೋಡಣೆಯ ಗಡುವನ್ನು ಜೂನ್ 30ಕ್ಕೆ ಇಲಾಖೆ ವಿಸ್ತರಿಸಿರುವುದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ.
ಓದಿ : ಐಪಿಎಲ್ ನಿಂದ ಹಿಂದೆ ಸರಿದ ವೇಗಿ ಹ್ಯಾಜಲ್ ವುಡ್: ಕಾಲೆಳೆದ ನೆಟ್ಟಿಗರು