Advertisement
ದೇಶದಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದದ್ದು 2011ರ ಫೆಬ್ರವರಿ- ಮಾರ್ಚ್‌ನಲ್ಲಿ. 10 ವರ್ಷಗಳ ಬಳಿಕ ಅಂದರೆ 2021ರಲ್ಲಿ ಮತ್ತೆ ಗಣತಿ ನಡೆಯಬೇಕಿತ್ತಾದರೂ ಆಗ ಕೋವಿಡ್ ಸಾಂಕ್ರಾಮಿಕ ಹಾವಳಿ ಎಬ್ಬಿಸಿದ್ದರಿಂದ ಸಾಧ್ಯ ವಾಗಿರಲಿಲ್ಲ. ಇನ್ನೀಗ 2023ರಲ್ಲಿ ಜನಗಣತಿ ನಡೆಯುವ ಸಾಧ್ಯತೆಯಿದೆ.
ಗಣತಿಗೆ ಸಂಬಂಧಿಸಿದಂತೆ 2020ರ ಅಂತ್ಯದ ವೇಳೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿತ್ತು. ಆ್ಯಪ್ ಕೂಡ ಸಿದ್ಧವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮಾಸ್ಟರ್ ಟ್ರೈನರ್ ಬೆಂಗಳೂರಿಗೆ ತೆರಳಿ ತರಬೇತಿ ಪಡೆದಿದ್ದರು. 35 ಮಂದಿ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳನ್ನು ಜನಗಣತಿಯಲ್ಲಿ ಚಾರ್ಜ್ ಆಫೀಸರ್‌ಗಳಾಗಿ ನಿಯೋಜಿಸಲಾಗಿತ್ತು. 114 ಮಂದಿ ಫೀಲ್ಡ್ ಟ್ರೈನರ್ಗಳಿಗೆ ತರಬೇತಿ ನೀಡಿ, ಆ್ಯಪ್‌ನ ಡಾಟಾ ಸಂಗ್ರಹಕ್ಕೆ 64 ಮಂದಿ ಕಂಪ್ಯೂಟರ್ ನಿರ್ವಾಹಕರನ್ನೂ ನೇಮಕ ಮಾಡಿ ತರಬೇತಿ ನೀಡಲಾಗಿತ್ತು. ಈ ಎಲ್ಲ ಅಧಿಕಾರಿ, ಸಿಬಂದಿಯನ್ನು ಸದ್ಯಕ್ಕೆ ಕೆಲಸದಿಂದ ಹಿಂಪಡೆಯಲಾಗಿದೆ.
Related Articles
ಜನಗಣತಿ ನಡೆಯದಿರುವುದು ಕೇಂದ್ರದಿಂದ ರಾಜ್ಯಗಳಿಗೆ ಬಿಡುಗಡೆಯಾಗುವ ಅನುದಾನ ಹಂಚಿಕೆ ಮೇಲೆ ಪರಿಣಾಮ ಬೀರುತ್ತದೆ. ಅನುದಾನಗಳು 15ನೇ ಹಣಕಾಸು ಆಯೋಗದ ಶಿಫಾರಸಿನ ಮೇಲೆ ಬಿಡುಗಡೆಯಾತ್ತವೆ. ಈ ಆಯೋಗ 2011ರ ಜನಗಣತಿ ಆಧಾರದಲ್ಲಿ 2017ರಲ್ಲಿ ರಚಿಸಲಾಗಿದ್ದು, 2025 26ರಲ್ಲಿ ಅದರ ಅವಧಿ ಮುಗಿಯುತ್ತದೆ. ಸದ್ಯ ಆಯೋಗದದಲ್ಲಿರುವ ಅಂಕಿ- ಅಂಶ (ಡಾಟಾ) 10 ವರ್ಷ ಹಳೆಯದು.
Advertisement
ಹೊಸ ತಾಲೂಕುಗಳು ರಚನೆ ಯಾಗಿರುವುದರಿಂದ ಗಡಿ ಪ್ರದೇಶ ಗಳಿಗೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆಡಿ. 31ರೊಳಗೆ ತಿಳಿಸುವಂತೆ ಸರಕಾರದಿಂದ ಸೂಚನೆ ಬಂದಿದೆ. ಆದರೆ ಗಣತಿಯನ್ನು ಯಾವಾಗ, ಹೇಗೆ ಆರಂಭಿಸ ಬೇಕು ಎನ್ನುವ ಕುರಿತು ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.
-ಸುಷ್ಮಾ ಕೆ.ಎಸ್.
-ಸಂಖ್ಯಾ ಸಂಗ್ರಹಣಾಧಿಕಾರಿ (ಪ್ರಭಾರ), ದ.ಕ. ಜಿಲ್ಲೆ - ಭರತ್ ಶೆಟ್ಟಿಗಾರ್