Advertisement

ಹರೀಶ್‌ ಬಂಗೇರ ನಕಲಿ ಖಾತೆ ಪ್ರಕರಣ: ಕ್ಷಿಪ್ರಗತಿಯಲ್ಲಿ ಪ್ರಕರಣ ಭೇದಿಸಿದ್ದ ಸೆನ್‌ ಪೊಲೀಸರು

12:54 AM Aug 27, 2021 | Team Udayavani |

ಕುಂದಾಪುರ: ಸಾಮಾನ್ಯವಾಗಿ ಸೈಬರ್‌ ಪ್ರಕರಣದಲ್ಲಿ ಮಾಹಿತಿ ಕಲೆ ಹಾಕುವುದು ಮತ್ತು ಆರೋಪ ಪಟ್ಟಿ ಸಲ್ಲಿಸುವುದೇ ಕ್ಲಿಷ್ಟಕರ. ಅದರಲ್ಲಿ ಯಶಸ್ವಿ ಯಾದರೆ ಅರ್ಧ ಯಶಸ್ವಿಯಾದಂತೆ. ವಿನಾಕಾರಣ 20 ತಿಂಗಳ ಕಾಲ ಸೌದಿ ಅರೇಬಿಯಾ ದ ಜೈಲ್ಲಿನದ್ದ ಬೀಜಾಡಿಯ ಹರೀಶ್‌ ಬಂಗೇರ ಪ್ರಕರಣದಲ್ಲೂ ಇದೇ ನೆರವಿಗೆ ಬಂದಿದ್ದು.

Advertisement

ಉಡುಪಿ ಸೆನ್‌ ಪೊಲೀಸರು ಈ ನೆಲೆಯಲ್ಲಿ ಯಶಸ್ವಿಯಾದದ್ದು ಹರೀಶ್‌ ಬಂಗೇರರ ಬಿಡುಗಡೆ ಯಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನಲಾಗಿದೆ.

ಹರೀಶ್‌ ಬಂಗೇರ ದೋಷಮುಕ್ತರಾಗಿ ಆ. 17 ರಂದು ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ. ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಅವರ ಬಿಡುಗಡೆಗೆ ನಡೆದ ವಿವಿಧ ಪ್ರಯತ್ನಗಳಲ್ಲಿ ಸೆನ್‌ ಪೊಲೀಸರ ಕ್ಷಿಪ್ರಗತಿಯ ತನಿಖೆಯೂ ಸೇರಿದೆ.

ಸೌದಿ ದೊರೆ ಹಾಗೂ ಮೆಕ್ಕಾಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಬರೆದ ಆರೋಪದಲ್ಲಿ ದೇಶದ್ರೋಹ ಪ್ರಕರಣದಡಿ ಹರೀಶ್‌ ಅವರನ್ನು ಸೌದಿ ಪೊಲೀಸರು ಬಂಧಿಸಿದ್ದರು. ವಾಸ್ತವವಾಗಿ ಇಬ್ಬರು ಕಿಡಿಗೇಡಿಗಳು ಹರೀಶ್‌ ಹೆಸರಲ್ಲಿ  ನಕಲಿ ಖಾತೆ ಸೃಷ್ಟಿಸಿ ಸಂದೇಶವನ್ನು ಹಾಕಿದ್ದರು. ಪ್ರಕರಣದ ಕೂಲಂಕಷ ತನಿಖೆ ನಡೆಸಿ ನಿಜ ವಿಚಾರವನ್ನು ಬೆಳಕಿಗೆ ತಂದವರು ಉಡುಪಿಯ ಸೆನ್‌ ಪೊಲೀಸರು.

ಈ ಪ್ರಕರಣ ಹೊರ ದೇಶದ್ದಾಗಿದ್ದರಿಂದ ನಕಲಿ ಖಾತೆ ತೆರೆದವರ ಪತ್ತೆ ಮತ್ತಷ್ಟು ಕಷ್ಟಕರವಾಗಿತ್ತು. ಆದರೂ ಪೊಲೀಸರು, ತನಿಖೆ ಕೈಗೆತ್ತಿಕೊಂಡು ನಕಲಿ ಖಾತೆಯ ಯುಆರ್‌ಎಲ್‌ ಲಿಂಕ್‌ ಹುಡುಕಿ, ಐಪಿ ಅಡ್ರೆಸ್‌ ಕಲೆಹಾಕಿ, ಫೇಸ್‌ಬುಕ್‌ಗೆ ಕಳುಹಿಸಿದ್ದರು.

Advertisement

8 ತಿಂಗಳ ಬಳಿಕ ಅಲ್ಲಿಂದ ಬಂದ ಮಾಹಿತಿ ಯಂತೆ ನಕಲಿ ಖಾತೆಯನ್ನು ತೆರೆದ ವರು ಯಾರು, ಯಾವ ಮೊಬೈಲ್‌ನಿಂದ ತೆರೆಯಲಾಗಿತ್ತು,  ಯಾವ ಮೊಬೈಲ್‌ ಟವರ್‌ನಿಂದ ಈ ಪೋಸ್ಟ್‌  ರವಾನೆಯಾಗಿದೆ ಇತ್ಯಾದಿ ಮಾಹಿತಿ  ಪೊಲೀಸರ ಕೈಸೇರಿತು. ಮೊಬೈಲ್‌ ಲೊಕೇಶನ್‌ ಪತ್ತೆ ಮಾಡಿ ಆರೋಪಿಗಳಾದ ಮೂಡುಬಿದಿರೆ ಮೂಲದ ಸಹೋದರರಾದ ಅಬ್ದುಲ್‌ ಹುಯೇಸ್‌ ಮತ್ತು ಅಬ್ದುಲ್‌ ತುವೇಸ್‌ನನ್ನು ಪೊಲೀಸರು ಬಂಧಿಸಿದರು.

ಹತ್ತೇ ತಿಂಗಳಲ್ಲಿ ಆರೋಪ ಪಟ್ಟಿ:

ಸಾಮಾನ್ಯವಾಗಿ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಪ್ರಕ್ರಿಯೆ. ಒಂದೂವರೆ- 2 ವರ್ಷ ಆದದ್ದಿದೆ. ಆದರೆ ಈ ಪ್ರಕರಣದಲ್ಲಿ ಕೇವಲ 10 ತಿಂಗಳಲ್ಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 2019ರ ಡಿ. 21ರಂದು ಸೌದಿ ಪೊಲೀಸರು ಹರೀಶ್‌ ಅವರನ್ನು ಬಂಧಿಸಿದ್ದು, ಡಿ. 22ಕ್ಕೆ ಸೆನ್‌ ಠಾಣೆಯಲ್ಲಿ ಪತ್ನಿ ಸುಮನಾ ದೂರು ದಾಖಲಿಸಿದ್ದರು. 2020ರ ಸೆ. 8ಕ್ಕೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಸವಾಲಿನ ಪ್ರಕರಣ ನಿಭಾಯಿಸುವಲ್ಲಿ ಆಗಿನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಪಿ. ಜೇಮ್ಸ್‌, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಸೆನ್‌ ಠಾಣಾಧಿಕಾರಿ ಸೀತಾರಾಮ್‌ ಕಾರ್ಯ ಪ್ರವೃತ್ತರಾಗಿದ್ದರು. ಈಗಿನ ಎಸ್ಪಿ ಎನ್‌. ವಿಷ್ಣುವರ್ಧನ್‌ ಮಾರ್ಗದರ್ಶನದಲ್ಲಿ, ಈಗಿನ ಸೆನ್‌ ಠಾಣಾಧಿಕಾರಿ ರಾಮಚಂದ್ರ ನಾಯಕ್‌ ನೇತೃತ್ವದ ತಂಡದ ಪಾತ್ರ ಪ್ರಮುಖವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next