Advertisement
ಬಿಬಿಎಂಪಿ ವ್ಯಾಪ್ತಿಯ ಸ್ಮಶಾನ, ರುದ್ರಭೂಮಿ,ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆಕಳೆದ 8-10 ತಿಂಗಳಿಂದ ವೇತನ ಸಿಕ್ಕಿಲ್ಲ. ಈ ಬಗ್ಗೆಪ್ರತಿಭಟನೆ ಮಾಡಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಹೀಗೆ ಇದ್ದರೆ “ಮುಷ್ಕರ’ಅಥವಾ “ಕಾರ್ಯಸ್ಥಗಿತ’ ಅನಿವಾರ್ಯವಾಗಲಿದೆಎಂದು ಹೇಳುತ್ತಿದ್ದಾರೆ ರುದ್ರಭೂಮಿ ನೌಕರರು.
Related Articles
Advertisement
ರುದ್ರಭೂಮಿ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆದಿದೆ. ಈಗ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವುಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ, ಹೆಚ್ಚೆಚ್ಚು ಶವಸಂಸ್ಕಾರಗಳನ್ನು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಸೋಂಕಿತ ಶವಗಳ ಸಂಸ್ಕಾರ ಮಾಡುವಾಗ ಹೆಚ್ಚು ಅಪಾಯಕ್ಕೂ ತುತ್ತಾಗಬೇಕಾಗುತ್ತದೆ. ಶವಸಂಸ್ಕಾರ ಮಾಡುವವರು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಲಸಿಕೆ ಸಿಕ್ಕಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಶವಸಂಸ್ಕಾರ ಕಾರ್ಯವನ್ನು ಸ್ಥಗಿತಗೊಳಿಸುವುದು ರುದ್ರಭೂಮಿ ನೌಕರರಿಗೆ ಅನಿವಾರ್ಯವಾಗಬಹುದು ಎಂದು ರುದ್ರಭೂಮಿ ನೌಕರರ ಬೇಡಿಕೆಗಳ ಹೋರಾಟದ ಮುಂದಾಳತ್ವ ವಹಿಸಿರುವ ನರಸಿಂಹಮೂರ್ತಿ ಹೇಳುತ್ತಾರೆ.
ಕಾಯಿಲೆ ಉಚಿತ; ಬಿಡಿಗಾಸೇ ಗತಿ :
ಸ್ಮಶಾನಗಳನ್ನು ಕಾವಲು ಕಾಯುವುದರ ಜೊತೆಗೆ ಗುಂಡಿ ತೋಡುವ ಮತ್ತು ಶವ ಸಂಸ್ಕಾರ ಬೇಕಾದ ಇತರವ್ಯವಸ್ಥೆಗಳನ್ನು ಮಾಡುವ ಕಾರ್ಯದಲ್ಲಿ ರುದ್ರಭೂಮಿನೌಕರರು ತೊಡಗಿಸಿಕೊಳ್ಳುತ್ತಾರೆ. ಒಂದು ಸ್ಮಶಾನದಲ್ಲಿ ದಿನಕ್ಕೆಕನಿಷ್ಠ 5ರಿಂದ 10 ಶವ ಸಂಸ್ಕಾರ ನಡೆಸಬೇಕಾಗುತ್ತದೆ.ಶವಗಳ ಸ್ಥಿತಿ ಹೇಗೇ ಇದ್ದರೂ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕೊಳೆತ ಶವಗಳು, ಅನಾಥ ಶವಗಳು, ಅಪಘಾತದಲ್ಲಿ ನಜ್ಜುಗುಜ್ಜಾದ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಮುಂದೆ ಬರುವುದಿಲ್ಲ. ನಾವೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಅವರು ಕುಟುಂಬಸ್ಥರುನೀಡುವ ಧವಸಧಾನ್ಯ, ಬಿಡಿಗಾಸು ಅವಲಂಬಿಸಬೇಕಾಗುತ್ತದೆ. ಯಾವುದೇ ಸುರಕ್ಷತೆ, ರಕ್ಷಣೆ ಇರುವುದಿಲ್ಲ. ಹಲವುಬಗೆಯ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ನಮಗೆಹೆಲ್ತ್‌ಕಾರ್ಡ್ ಕೊಡಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಿಎಂದು ನಮ್ಮ ಬೇಡಿಕೆಯಾಗಿದೆ ಎಂದು ಹರಿಶ್ಚಂದ್ರಘಾಟ್ ರುದ್ರಭೂಮಿ ನೌಕರರೊಬ್ಬರು ಹೇಳುತ್ತಾರೆ.
ರುದ್ರಭೂಮಿ ನೌಕರರ ವೇತನ, ಉದ್ಯೋಗ ಭದ್ರತೆ, ಕೆಲಸದ ಸ್ಥಳದಲ್ಲಿ ರಕ್ಷಣೆ ಮತ್ತು ಸುರಕ್ಷತೆ, ಮಕ್ಕಳ ಶಿಕ್ಷಣ ಇತ್ಯಾದಿ ಬೇಡಿಕೆ ಕುರಿತು ಬಿಬಿಎಂಪಿ ಆಯುಕ್ತರ ಗಮನಕ್ಕೆತರಲಾಗಿದೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಯಾವುದೇ ಸ್ಪಷ್ಟ ಭರವಸೆ ಕೊಡದೆ ಕಾಲ ಮುಂದೂಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು. – ಸುರೇಶ, ರುದ್ರಭೂಮಿ ನೌಕರರ ಸಂಘದ ಮುಖಂಡ
ರಫೀಕ್ ಅಹ್ಮದ್