Advertisement

ಏಕಾಏಕಿ ಮೊಬೈಲ್ ಸ್ಫೋಟಕ್ಕೆ 12 ವರ್ಷದ ಬಾಲಕ ಸಾವು

10:05 AM Jun 07, 2019 | Team Udayavani |

ನವದೆಹಲಿ:ಸೆಲ್ ಫೋನ್ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

Advertisement

ಧಾರ್ ಜಿಲ್ಲೆಯ ಬದ್ನಾವರ್ ನಗರದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಲಿಖೇಡಿ ಗ್ರಾಮದ ಬಾಲಕ ಲಖನ್(12ವರ್ಷ) ಮೃತಪಟ್ಟ ದುರ್ದೈವಿ ಎಂದು ವರದಿ ತಿಳಿಸಿದೆ.

ಲಖನ್ ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿದ ವೇಳೆ ಏಕಾಏಕಿ ಬ್ಯಾಟರಿ ಸ್ಫೋಟಗೊಂಡಿತ್ತು. ಶಬ್ದ ಕೇಳಿದ ಕೂಡಲೇ ಆತನ ಚಿಕ್ಕಪ್ಪ ಮನೆಯೊಳಗೆ ಹೋದಾಗ ಬಾಲಕ ನೆಲದ ಮೇಲೆ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಖನ್ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಿಬಿ ಸಿಂಗ್ ತಿಳಿಸಿದ್ದಾರೆ.

ಮೊಬೈಲ್ ಸ್ಫೋಟಗೊಂಡ ತೀವ್ರತೆಗೆ ಸ್ವಿಚ್ ಬೋರ್ಡ್ ಧ್ವಂಸಗೊಂಡಿರುವುದಾಗಿ ಹುಡುಗನ ಸಂಬಂಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಬಾಲಕನ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next