Advertisement

ಸಂಭ್ರಮದ ರೇವಗ್ಗಿ ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವ

11:08 AM Aug 28, 2018 | |

ಕಾಳಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ರೇವಗ್ಗಿ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಶ್ರಾವಣ ಮಾಸದ ನಡುವಿನ ಸೋಮವಾರ ಸಂಜೆ ಅಪಾರ ಭಕ್ತ ಜನಸಾಗರದ ಮಧ್ಯೆ ಸಂಭ್ರಮದಿಂದ ನಡೆಯಿತು.

Advertisement

ಪಲ್ಲಕ್ಕಿ ಉತ್ಸವದ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರಾವಣ ಮಾಸದ ನಡುವಿನ ಸೋಮವಾರ ಬೆಳಗ್ಗೆ 3:00ಕ್ಕೆ ರೇವಣಸಿದ್ದೇಶ್ವರ ಮೂರ್ತಿಗೆ ಕಾಕಡಾರತಿ, 4:00ಕ್ಕೆ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರ ನೇತೃತ್ವದಲ್ಲಿ ರೇವಣಸಿದ್ದೇಶ್ವರ ತಪೋ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ನಡೆದವು. 9:00ಕ್ಕೆ ಗ್ರಾಮದ ಚನ್ನಬಸಪ್ಪ ದೇವರಮನಿ ಅವರ
ಮನೆಯಿಂದ ಉತ್ಸವ ಮೂರ್ತಿ ಬೆಡಸೂರ, ರೇವಗ್ಗಿ, ರಟಕಲ್ಲ, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ
ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದೇವಸ್ಥಾನಕ್ಕೆ ಬಂದು ತಲುಪಿತು.

ಸಂಜೆ ನಡೆದ ರೇವಣಸಿದ್ದೇಶ್ವರ ಅಲಂಕೃತ ಬೆಳ್ಳಿ ಪಲಕ್ಕಿ ಉತ್ಸವದಲ್ಲಿ ಭಕ್ತರು ಉತ್ತತ್ತಿ, ಬಾದಾಮಿ, ಬಾಳೆಹಣ್ಣು, ನಾಣ್ಯ,
ಫಲಪುಷ್ಪ ಸಮರ್ಪಿಸಿ ಕೃತಾರ್ಥರಾದರು. ಕೆಲವು ಭಕ್ತರು ಪಲ್ಲಕ್ಕಿ ಎದುರು ಉರುಳು ಸೇವೆ ಮಾಡಿ ಹರಕೆ ತೀರಿಸಿದರು.
 
ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ರಟಕಲ್ಲನ ಪೂಜ್ಯ ರೇವಣಸಿದ್ದ ಶಿವಾಚಾರ್ಯ, ಪೂಜ್ಯ
ಸಿದ್ದಾರಾಮ ಶಿವಾಚಾರ್ಯರು, ಸೇಡಂ ಸಹಾಯಕ ಆಯುಕ್ತೆ ಡಾ| ಬಿ. ಸುಶೀಲಾ, ಕಾಳಗಿ ತಹಶೀಲ್ದಾರ ಶಾಂತಗೌಡ
ಬಿರಾದಾರ, ತಾಪಂ ಸದಸ್ಯ ರಾಮು ರಾಠೊಡ, ಶಿವರಾಜ ಪಾಟೀಲ ಗೋಣಗಿ, ದತ್ತಾತ್ರೇಯ ರಾಯಗೋಳ, ಸಿದ್ದಯ್ಯಸ್ವಾಮಿ ಮುಕರಂಬಾ, ರೇವಣಸಿದ್ದಪ್ಪ ಚೇಂಗಟಿ, ರವಿ ಪಾಟೀಲ, ಚನ್ನಬಸಪ್ಪ ಮಂಠಾಳ, ಸಿದ್ದು ಚಿಟ್ನಳಿ, ರೇವಣಸಿದ್ಧಪ್ಪ ಕುರಕೋಟಾ, ಮಲ್ಲು ಹೂಗಾರ, ಕಮಲಾಕರ್‌ ಕಡಗದ, ಸಿದ್ದಣಗೌಡ ಬಿರೆದಾರ, ಅಣವೀರಯ್ಯ ಮುಕರಂಬಾ, ನಾಗರಾಜ ಮುಳಜಿ, ರೇಣುಕಯ್ಯ ಸ್ವಾಮಿ, ಓಂಕಾರಸ್ವಾಮಿ, ಸಿದ್ದು ಚಿಟ್ನಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next