ಚಡಚಣ: ಮುಂಬರುವ ಜನವರಿಯಿಂದ ಚಡಚಣ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಆರಂಭಿಸುವಂತೆ ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಘೋಷಿತ ಚಡಚಣ ತಾಲೂಕು ಹೋರಾಟ ಸಮಿತಿಯಯಿಂದ ಶುಕ್ರವಾರ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಹೋರಾಟ ಸಮಿತಿ ಉಪಾಧ್ಯಕ್ಷ ಜಿ.ಡಿ. ಪಾವಲೆ ಮಾತನಾಡಿ, ಸುಮಾರು ದಶಕಗಳಿಂದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ರಚಿಸುವಂತೆ ಆಗ್ರಹಿಸಿ ಅನೇಕ ಬಾರಿ ಇಲ್ಲಿಯ ನಾಗರಿಕರು ಹೋರಾಟ ನಡೆಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017-18ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದ ಚಡಚಣ ಪಟ್ಟಣ ತಾಲೂಕು ಕೇಂದ್ರವನ್ನು ಜನವರಿ ತಿಂಗಳಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡುವಂತೆ ಆದೇಶ ಮಾಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ರಚಿಸಲು ಶ್ರಮಿಸಿದ ನಾಗಠಾಣ ಶಾಸಕ ರಾಜು ಆಲಗೂರ ಅವರಿಗೆ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಹೋರಾಟ ಸಮೀತಿಯ ಅಧ್ಯಕ್ಷ ಪ್ರಭಾಕರ ನಿರಾಳೆ, ಪದಾಧಿಕಾರಿಗಳಾದ ಅಶೋಕ ಕುಲಕರ್ಣಿ, ಮಹಾದೇವ ಯಂಕಂಚಿ, ಮಲ್ಲಿಕಾರ್ಜುನ ಉಮರಾಣಿ, ಮಹಾದೇವ
ಬನಸೋಡೆ, ದಶರಥ ಬನಸೋಡೆ, ಶಕೀಲ ಖಾಟಿಕ, ಶಿವಣ್ಣ ಪಾಂಡ್ರೆ, ಚಡಚಣ ಎಸ್‌ಸಿ ಘಟಕದ ಅಧ್ಯಕ್ಷ ಪ್ರಕಾಶ ಕಟ್ಟಿಮನಿ, ಮುಖಂಡರಾದ ಐ.ಎಚ್. ಮಕಾನದಾರ, ಬಾಬುಗೌಡ ಬಿರಾದಾರ (ಪಿಗ್ಮಿ), ಎಂ.ಆರ್.ಹಿಟ್ನಳ್ಳಿ, ಮಹಾದೇವ ಕರ್ಲಮಳ, ನಾಗೇಶ ಗಾಯಕವಾಡ, ಜಟ್ಟೆಪ್ಪ ಜತ್ತಿ, ರಾಹುಲ್ ಲೋಖಂಡೆ ಇದ್ದರು.