Advertisement

ಬೆಳಕು ಪಸರಿಸಿದ ಕನಕದಾಸರು: ಪಲಿಮಾರು ಶ್ರೀ

12:19 AM Nov 16, 2019 | mahesh |

ಉಡುಪಿ: ಕನಕದಾಸರ ಜಯಂತಿ ಇಡೀ ಜಗತ್ತಿಗೆ ದೀಪೋತ್ಸವ ವನ್ನು ಉಂಟುಮಾಡಿದೆ. ಕನಕರ ಸಾಹಿತ್ಯ, ಜೀವನ ಪರಂಪರೆಗಳು ಅಜರಾಮರ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಬಣ್ಣಿಸಿದರು.

Advertisement

ಬೆಂಗಳೂರಿನ ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ಮತ್ತು ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಮತ್ತು ಭಕ್ತ ಕನಕದಾಸರ 532ನೇ ಜಯಂತಿ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಹಾಲುಮತ ಸಮಾಜ ಭಿನ್ನಾಭಿಪ್ರಾಯ ಮರೆತು ಸಮುದಾಯದ ಅಭಿವೃದ್ಧಿಗೆ ಗಮನ ಹರಿಸ ಬೇಕು. ಕನಕರಿಗೂ ಉಡುಪಿಗೂ ಇರುವ ಸಂಬಂಧದಿಂದಾಗಿ ಉಡುಪಿಯಲ್ಲಿ ಆಚರಿಸುವ ಕನಕ ಜಯಂತಿಗೆ ಅದರದ್ದೇ
ಆದ ಮಹತ್ವ ಇದೆ. ಕನಕ ಮಂದಿರ ಪುನರ್‌ ನಿರ್ಮಾಣಕ್ಕೆ ನಿಮ್ಮ ಜತೆಗಿದ್ದು ಸಂಪೂರ್ಣ ಸಹಕಾರ ನೀಡಲಾಗುವುದು. ಬಾಲ್ಯ ವಿವಾಹ ಪದ್ಧತಿ ಕಿತ್ತೆಸೆಯಿರಿ ಎಂದು ಹಾಲುಮತ ಸಮುದಾಯಕ್ಕೆ ಕರೆ ನೀಡಿದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್‌ ವಹಿಸಿದ್ದರು. ಬೆಂಗಳೂರಿನ ಶ್ರೀ ಉಮಾಶಂಕರ ಸ್ವಾಮೀಜಿ, ಸಾಹಿತಿಗಳಾದ ಪ್ರೊ| ಕೃಷ್ಣಮೂರ್ತಿ, ಪ್ರೊ| ಚೊಕ್ಕನಳ್ಳಿ ಮಹೇಶ್‌, ಸಮಿತಿಯ ರಾಜ್ಯಾಧ್ಯಕ್ಷ ಓಂ ಕೃಷ್ಣಮೂರ್ತಿ, ಅಲೆವೂರು ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಐಹೊಳೆ, ಮಾಜಿ ಅಧ್ಯಕ್ಷ ಹನುಮಂತ ಎಸ್‌. ಡೊಳ್ಳಿನ, ಬಳ್ಳಾರಿ ಜಿ.ಪಂ. ಸದಸ್ಯ ಪರಶುರಾಮ, ಕನಕ ಸದ್ಭಾವನ ಜ್ಯೋತಿ ನಾಗಮ್ಮ, ಕಾಂತಮ್ಮ, ಪುಷ್ಪಲತಾ, ಕಿರಣ್‌ ಉಪಸ್ಥಿತರಿದ್ದರು. ಕನಕ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು.

ಬೆಂಗಳೂರಿನಿಂದ ಉಡುಪಿಗೆ ಬಂದ ಕನಕ ಸದ್ಭಾವನ ಜ್ಯೋತಿ ರಥಯಾತ್ರೆಗೆ ಜೋಡುಕಟ್ಟೆಯಲ್ಲಿ ಜಿಲ್ಲಾ ಕನಕದಾಸ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಚಾಲನೆ ನೀಡಿದರು. ಮೆರವಣಿಗೆ ನಗರದಲ್ಲಿ ಸಂಚರಿಸಿ ಶ್ರೀಕೃಷ್ಣ ಮಠದ ಎದುರಿನ ಕನಕದಾಸರ ಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಕನಕದಾಸರ ಮೂರ್ತಿಗೆ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ವಿವಿಧೆಡೆ ಕನಕ ಜಯಂತಿ
ಇದೇವೇಳೆ ಕರಾವಳಿಯ ವಿವಿಧೆಡೆ ಕನಕದಾಸ ಜಯಂತಿಯನ್ನು ಶುಕ್ರವಾರ ಶ್ರದ್ಧಾಪೂರ್ವಕ ಆಚರಿಸಲಾಯಿತು. ಉಡುಪಿಯಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.  ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನಕದಾಸ ಜಯಂತಿ ನಡೆಯಿತು. ಕನಕರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next