Advertisement

America: ಚಾಂದ್ರಮಾನ ಯುಗಾದಿ; ಅಮೇರಿಕಾದಲ್ಲಿ ಸಂಭ್ರಮದ ಯುಗಾದಿ  ಆಚರಣೆ

03:58 PM Apr 10, 2024 | Team Udayavani |

ಪರಮಪೂಜ್ಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಸ್ಥಾಪಿಸಿರುವ ಹದಿನೈದು ಶ್ರೀ ಪುತ್ತಿಗೆ  ಮಠಗಳಲ್ಲಿಯೂ ಚಾಂದ್ರ ಯುಗಾದಿ ಹಬ್ಬದ ಆಚರಣೆಯು ಸಾಂಗವಾಗಿ  ವೈಭವದಿಂದ ನೆರವೇರಿತು.

Advertisement

ಅನಿವಾಸಿ ಭಾರತೀಯ ಭಕ್ತರು ಬೆಳಿಗ್ಗಿನಿಂದ ನಡೆದ ಹೋಮ, ಪೂಜಾದಿ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ಪೂಜಾ ನಂತರದಲ್ಲಿ ಪಂಚಾಗ ಶ್ರವಣ ವ್ಯವಸ್ಥೆ ಮಾಡಲಾಗಿದ್ದು 12 ರಾಶಿ ಸಂಜಾತರ ವರ್ಷ ಭವಿಷ್ಯವನ್ನು ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು. ಪೂಜೆಯ ನಂತರ ಪ್ರಸಾದದೊಂದಿಗೆ ಬೇವು-ಬೆಲ್ಲ  ಹಂಚಲಾಯಿತು.

ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ಭಕ್ತ ಜನರನ್ನು ಹರಸಿದರು.

Advertisement

ಅಮೇರಿಕಾದಲ್ಲಿ  ಮೊಟ್ಟ ಮೊದಲು ಪೂಜ್ಯ ಪುತ್ತಿಗೆ ಶ್ರೀಪಾದರು ಸ್ಥಾಪಿಸಿದ್ದ ಶ್ರೀಪುತ್ತಿಗೆ ಮಠದ ಶ್ರೀ ವೆಂಕಟ ಕೃಷ್ಣ ಕ್ಷೇತ್ರದಲ್ಲಿಸಾವಿರಾರು ಭಕ್ತರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next