Advertisement

ಸಸಿ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಳ್ಳಿ

12:16 PM May 04, 2019 | Team Udayavani |

ಕೆ.ಆರ್‌.ಪೇಟೆ: ನಾಡು, ನುಡಿ, ನೆಲ, ಜಲ ಉಳಿವಿಗೆ ಜಯ ಕರ್ನಾಟಕ ಸಂಘಟನೆ ನಾಡಿನಾದ್ಯಂತ ಹೋರಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್‌.ಕುಮಾರ್‌ ಹೇಳಿದರು.

Advertisement

ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಸಂಘಟನೆ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಆಚರಿಸಿ ಮಾತನಾಡಿದ ಅವರು, ಸಂಘಟನೆ ನಿರಂತರ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಮಹೇಶ್‌ ಮಾತನಾಡಿ, ಪರಿಸರ ಸಮತೋಲನ ಕಾಯ್ದುಕೊಂಡು ಭೂಮಿ ಆರೋಗ್ಯ ಕಾಪಾಡಬೇಕಿದೆ. ಪರಿಸರದ ಉಳಿವಿಗಾಗಿ ಅರಣ್ಯ ಸಂರಕ್ಷಣೆ ಮಾv‌ಬೇಕು. ಪ್ಲಾಸ್ಟಿಕ್‌ ಬಳಕೆ ಕಡ್ಡಾಯವಾಗಿ ನಿಲ್ಲಿಸಬೇಕು. ಭೂಮಿಯ ಆರೋಗ್ಯ ಚನ್ನಾಗಿದ್ದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಅರಣ್ಯ ಉಳಿಸದಿದ್ದರೆ ಭವಿಷ್ಯದ ದಿನಗಳಲ್ಲಿ ಮನುಷ್ಯ ಸೇರಿ ದಂತೆ ಸಕಲ ಜೀವರಾಶಿಗಳು ನೀರು ಮತ್ತು ಆಹಾರಕ್ಕೆ ಪರಿತಪಿಸಬೇಕಾದ ದುಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು ಎಂದು ಮನವಿ ಮಾಡಿದರು. ಸಂಘ ಟ ನೆಯ ಉಪಾಧ್ಯಕ್ಷ ಅಜಯ್‌, ಸಂಘ ಟನಾ ಕಾರ್ಯದರ್ಶಿ ಸೋಮು, ಮಾಧ್ಯಮ ಕಾರ್ಯದರ್ಶಿ ಲೋಕೇಶ್‌, ಆಟೋ ಚಾಲಕರ ಘಟಕದ ಅಧ್ಯಕ್ಷ ಆಟೋ ಸೋಮು, ಮಹಿಳಾ ಘಟಕದ ಕಾರ್ಯಧ್ಯಕ್ಷೆ ಸರಸ್ವತಿ, ಗೌರವಾಧ್ಯಕ್ಷ ಜಯಲಕ್ಷ್ಮೀ, ಉಪಾಧ್ಯಕ್ಷ ಅರೆಬೊಪ್ಪನಹಳ್ಳಿ ಜಯ, ರಾಜಮ್ಮ, ಕಾರ್‌ ಚಂದ್ರಣ್ಣ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next