Advertisement

ಹಬ್ಬ ಶಾಂತಿಯಿಂದ ಆಚರಿಸಿ

04:13 PM Aug 21, 2017 | Team Udayavani |

ಸುರಪುರ: ತಾಲೂಕಿನ ವಿವಿಧೆಡೆ ಆಚರಿಸುವ ಗಣೇಶ ಉತ್ಸವವನ್ನು ಶಾಂತಿಯುತ ಮತ್ತು ಸೌರ್ಹಾದತೆಯಿಂದ
ಆಚರಿಸಬೇಕು ಎಂದು ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು. ರಂಗಂಪೇಟೆಯ ತರಕಾರಿ ಮಾರುಕಟ್ಟೆ ಹತ್ತಿರ ಗಣೇಶ ಉತ್ಸವದ ಅಂಗವಾಗಿ ರವಿವಾರ ಸಂಜೆ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು. ಗಣೇಶನನ್ನು ಪ್ರತಿಸ್ಥಾಪಿಸುವ ಸಂಘ-ಸಂಸ್ಥೆಯವರು ನಿಗದಿತ ಸ್ಥಳ ತಿಳಿಸಿ ಪೊಲೀಸ್‌ ಮತ್ತು ಜೆಸ್ಕಾಂ ಇಲಾಖೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆದುಕೊಳ್ಳಬೇಕು. ವಿಸರ್ಜನೆ ದಿನಾಂಕ ಮತ್ತು ಮಾರ್ಗವನ್ನು ಮುಂಚಿತವಾಗಿ ತಿಳಿಸಿದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸುವುದಾಗಿ ಹೇಳಿದರು.ಕೋಮುಭಾವನೆ ಕೆರಳಿಸುವ ಉಪನ್ಯಾಸಗಳನ್ನು ಏರ್ಪಡಿಸಬಾರದು. ವಿಸರ್ಜನೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು. ಯುವಕರು ಕುಡಿದು ಕುಣಿಯುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಆಸ್ಪದ ನೀಡದೆ ಉತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಭಾತೃತ್ವ ಮೆರೆಯಬೇಕು ಎಂದು ಸಲಹೆ ನೀಡಿದರು. ಪಿಐ ಆರ್‌.ಎಫ್‌. ದೇಸಾಯಿ ಮಾತನಾಡಿ, ನಮ್ಮ ನಾಡು ಬಹು ಸಂಸ್ಕೃತಿಯ ನಾಡು. ಇಲ್ಲಿ ಅನೇಕ ಜಾತಿ ಪಂಥ, ಧರ್ಮೀಯರು ಇದ್ದಾರೆ. ಪ್ರತಿ ಜಾತಿ ಧರ್ಮಗಳ ಹಬ್ಬ ಹರಿದಿನಗಳ ಹಿಂದೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಎಲ್ಲರೂ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಮುಖ್ಯ ಪೇದೆ ಬೀಟ್‌ ಅಧಿಕಾರಿ ಮನೋಹರ ರಾಠೊಡ್‌ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಅಬುಲ್‌ಗ‌ಫರ ನಗನೂರಿ, ನಗರಸಭೆ ಸದಸ್ಯ ಭೀಮಾಶಂಕರ ಬಿಲ್ಲವ್‌ ವೇದಿಕೆಯಲ್ಲಿದ್ದರು. ಅಪ್ಸರ್‌ ಹುಸೇನ ದಲಾಲ್‌, ಲೂಟ್‌ ಬಾಬೂ, ಮಲ್ಲಿಕಾರ್ಜುನ ಬಿಲ್ಲವ್‌, ಮಹೇಂದ್ರಕುಮಾರ ಬಿಲ್ಲವ್‌, ಹರೀಶ ತ್ರಿವೇದಿ, ಪ್ರೇಮ ಮಹೇಂದ್ರಕರ್‌, ಬಾಲಕೃಷ್ಣ ಶಹಾಪುರಕರ್‌, ಇಲಿಯಾಸ್‌ ತಿಮ್ಮಾಪುರ, ಮಹೇಶ ಜಾಗೀರದಾರ, ತುಕಾರಾಮ ಟೊಣಪೆ, ಮನೋಹರ ಅಕ್ಕರಕಿ, ಕಾಸಿಂಅಲಿ ಕುರೇಶಿ, ಎಎಸ್‌ಐ ಪತುಮಿಯಾ ಇತರರು ಇದ್ದರು. ಪೊಲೀಸ್‌ ಪೇದೆ ಉಮಾಕಾಂತ ಸ್ವಾಗತಿಸಿದರು. ಅಮರೇಶ ನಿರೂಪಿಸಿದರು. ನಾಗರೆಡ್ಡಿ ವಂದಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next