Advertisement

ಭುವನೇಶ್ವರಿ ಪೂಜೆ ಮಾಡಿ ಸಂಭ್ರಮಿಸಿ; ಕರುನಾಡ ರಕ್ಷಣಾ ವೇದಿಕೆ

06:27 PM Dec 01, 2022 | Team Udayavani |

ಬಳ್ಳಾರಿ: ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್‌ ತಿಂಗಳಲ್ಲಿ ಮಾತ್ರ ಮಾಡಬಹುದು ಎಂಬುದು ತಪ್ಪು ಕಲ್ಪನೆ. ವರ್ಷಪೂರ್ತಿ ಯಾವಾಗಲಾದರೂ ನಾಡ ದೇವತೆ ಭುವನೇಶ್ವರಿ ಪೂಜೆಯನ್ನು ಮಾಡಿ, ಕನ್ನಡಿಗರು ಸಂಭ್ರಮಿಸಬಹುದು ಎಂದು ಬಿ.ಎಚ್‌. ಎಂ ವಿರೂಪಾಕ್ಷಯ್ಯ ಅಭಿಪ್ರಾಯ ಪಟ್ಟರು.

Advertisement

ನಗರದ ಡಾ| ರಾಜ್‌ಕುಮಾರ್‌ ರಸ್ತೆಯ ನಾರಾಯಣ ರಾವ್‌ ಉದ್ಯಾನವನದಲ್ಲಿ ವಿಜಯನಗರ ಕರುನಾಡ ರಕ್ಷಣಾ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಾಡದೇವತೆ ತಾಯಿ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಲೂರು ವೆಂಕಟರಾಯರು, ಆರ್‌. ಎಚ್‌.ದೇಶಪಾಂಡೆ, ಗುದೆಪ್ಪ ಹಳ್ಳಿಕೇರಿ, ಎ.ಜೆ.ದೊಡ್ಡ ಮೇಟಿ, ಹುಬ್ಬಳ್ಳಿ ಶಂಕರಗೌಡ, ಸರ್‌ ಸಿದ್ದಪ್ಪ ಕಂಬಳಿ, ರಂಗರಾವ್‌, ದಿವಾಕರ್‌ ಕೌಜಲಗಿ, ಶ್ರೀನಿವಾಸ್‌ ರಾವ್‌, ಮಂಗಳವಾಡೆ, ಕೆಂಗಲ್‌ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗರ್‌, ನಿಜಲಿಂಗಪ್ಪ, ಟಿ.ಮರಿಯಪ್ಪ, ಸಾಹುಕಾರ ಚೆನ್ನಪ್ಪ, ವೀರನಗೌಡ, ಎಚ್‌.ಸಿ.ದಾಸಪ್ಪ, ಎಚ್‌.ಸಿ ಸಿದ್ದಯ್ಯ, ಆ.ನಾ ಕೃಷ್ಣರಾಯರು, ನಾಲ್ವಡಿ ಕೃಷ್ಣರಾಯರು ಸೇರಿದಂತೆ ಏಕೀಕರಣಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಕನ್ನಡಿಗರು ಸ್ಮರಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಕಟ್ಟೆಮನೆ ಶಿವರಾಮಪ್ಪ, ರಾಜ್ಯ ಘಟಕ ಮುಖಂಡರಾದ ರಾಮಕೃಷ್ಣ, ಎಂ.ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಹಗರಿ ಬಸವರಾಜ್‌ ಬಿ., ಜಿಲ್ಲಾ ಕಾರ್ಯಾಧ್ಯಕ್ಷ ತಳವಾರ ಮಂಜುನಾಥ್‌ ನಾಯಕ್‌, ಜಿಲ್ಲಾ ಕಾರ್ಯದರ್ಶಿ ಕೆ. ಶ್ರೀರಾಮುಲು, ಜಿಲ್ಲಾ ಕಚೇರಿ ಕಾರ್ಯದರ್ಶಿ ಎಚ್‌. ದೇವೇಂದ್ರಗೌಡ, ಎಚ್‌. ವೆಂಕಟೇಶ್‌, ಸದಸ್ಯರಾದ ಶೇಖಣ್ಣ ಕಾಟೆಗುಡ್ಡ, ನಗರಾಧ್ಯಕ್ಷರ ಬಿ.ಗಾದಿಲಿಂಗಪ್ಪ, ತಾಲೂಕು ಕಾರ್ಯದರ್ಶಿ ಬಿ. ವೀರಾಂಜಿನೇಯಲು, ವಿ. ರಾಜು, ವಿ.ಜಗನ್ನಾಥ್‌ ಸೇರಿದಂತೆ ಹಲವರು ಇದ್ದರು. ಸಂಜನಾ ಪ್ರಾರ್ಥಿಸಿದರು. ಅನುಷಾ ವಂದಿಸಿದರು. ಸರಳಾದೇವಿ ಪದವಿ ಕಾಲೇಜಿನ
ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next