ನಾಗಮಂಗಲ: ಆಧುನಿಕತೆ ಎಷ್ಟೇ ಮುಂದುವರಿದರೂ ಗ್ರಾಮೀಣಪ್ರದೇಶದಲ್ಲಿ ಮೂಲ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಆಚರಣೆಇಂದಿಗೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿ.ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ವರ್ಷದ ಕೃಷಿಚಟುವಟಿಕೆಯ ಆರಂಭಕ್ಕೆ ಮುನ್ನುಡಿ ಬರೆಯುವುದೇಹೊನ್ನಾರು ಎಂಬ ವಿಶಿಷ್ಟ ಆಚರಣೆ.
ಯುಗಾದಿ ಹಬ್ಬದ ದಿನವಾದಮಂಗಳವಾರ ತಾಲೂಕಿನ ಕರಡಹಳ್ಳಿ ಗ್ರಾಮವೂ ಸೇರಿದಂತೆತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹೊನ್ನಾರು ಆಚರಣೆ ಸಡಗರ ಸಂಭ್ರಮದಿಂದ ನಡೆಯಿತು. ಪ್ಲವ ನಾಮ ಸಂವತ್ಸರದ ಹೊಸಪಂಚಾಗ ನೋಡಿಸಿದ ಗ್ರಾಮದ ಮುಖ್ಯಸ್ಥರು ಯಾರ ಹೆಸರಿನಲ್ಲಿಹನ್ನಾರು ಕಟ್ಟುವುದು ಪ್ರಶಸ್ತವಾಗಿ ಬರುವುದೋ ಅಂತಹವರನ್ನುಆಯ್ಕೆ ಮಾಡಿ ಆಯಾಯ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆನೆರವೇರಿಸಿ ಗ್ರಾಮಕ್ಕೆ ದೇವರ ಮೂಲೆಯ ಭಾಗದಿಂದ ಹೊನ್ನಾರುಹೂಡುವುದು ವಾಡಿಕೆಯಾಗಿದೆ. ಅಂತೆಯೇ ತಾಲೂಕಿನ ಬಹುತೇಕಗ್ರಾಮಗಳಲ್ಲಿ ಹೊನ್ನಾರು ಕಾರ್ಯಕ್ರಮ ನಡೆಯಿತು.
ಹೊನ್ನಾರು ಸಂಸ್ಕೃತಿ: ತಾಲೂಕಿನ ಪಡುವಲಪಟ್ಟಣ ಗ್ರಾಮದಲ್ಲಿಹೊನ್ನಾರು ಕಾರ್ಯಕ್ರಮ ನಡೆದು ಗ್ರಾಮದ ಆಂಜನೇಯಸ್ವಾಮಿದೇವಸ್ಥಾನದಲಿ ಪೂಜೆ ಸಲ್ಲಿಸಿ ಹೊನ್ನಾರು ಹೂಡಲಾಯಿತು.ತಮಟೆ ಸದ್ದಿನೊಂದಿಗೆ ಗ್ರಾಮದ ಸುತ್ತ ಒಂದು ಸುತ್ತು ಹೊಲಉಳುವ ಮೂಲಕ ಹೊನ್ನಾರು ಸಂಸ್ಕೃತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಲಾಪುರ ಹೋಬಳಿಯಕರಡಹಳ್ಳಿಯ ಶ್ರೀ ಬೋರೇದೇವರ ದೇವಸ್ಥಾನದ ಮುಂಭಾಗದಲ್ಲಿ Ã ುವ ಗರುಡಕಂಭದ ಮುಂದೆ ಮೂರು ಜೊತೆ ಸಿಂಗರಿಸಿದಎತ್ತುಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು.ಕೃಷಿ ಚಟುವಟಿಕೆಗೆ ಮುನ್ನುಡಿ: ನಂತರ ತಮಟೆ ಸದ್ದಿನೊಂದಿಗೆನೇಗಿಲು ಹೊತ್ತ ಮೂವರು ರೈತರು ಎತ್ತುಗಳೊಂದಿಗೆ ಮೂರು ಸುತ್ತುಪ್ರದಕ್ಷಿಣೆ ಹಾಕಿದರು.
ನಂತರ ಮೂರು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿಗ್ರಾಮದ ಸುತ್ತಲು ಉಳುಮೆ ಮಾಡುವ ಮೂಲಕ ವರ್ಷದ ಕೃಷಿಚಟುವಟಿಕೆಗೆ ಮುನ್ನುಡಿ ಬರೆದರು. ತಾಲೂಕಿನ ಮುಳಕಟ್ಟೆ ಗ್ರಾಮಸೇರಿದಂತೆ ವಿವಿಧೆಡೆ ಹೊನ್ನಾರು ಕಾರ್ಯಕ್ರಮ ಜರುಗಿದವು.ಕರಡಹಳ್ಳಿ ಗ್ರಾಮದ ಮುಖ್ಯಸ್ಥರಾದ ಕೆ.ಎಂ.ರಾಮಚಂದ್ರಪ್ಪ,ಕೆ.ಎಸ್.ಕೆಂಚೇಗೌಡ, ಗೋ.ರಾಮಣ್ಣ, ಎಸ್.ಗೋವಿಂದಯ್ಯ,ವೆಂಕಟೇಶ್, ದೇವೇಗೌಡ, ಗ್ರಾಪಂ ಸದಸ್ಯ ಸಿಂಗಾರಿಗೌಡ,ಅರ್ಚಕ ಸೋಮಶೇಖರಯ್ಯ ಈ ವೇಳೆ ಹಾಜರಿದ್ದರು.ಪೂರ್ವಿಕರಿಂದಲೂ ಆಚರಣೆಈ ವಿಶಿಷ್ಟ ಆಚರಣೆಯನ್ನು ಪೂರ್ವಿಕರಿಂದ ನಡೆಸಿಕೊಂಡು ಬಂದಿದ್ದು, ಇಂದಿಗೂ ಅದನ್ನುಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರ ಬಾಳುಹಸನಾಗಲಿ ಎಂಬ ಉದ್ದೇಶದಿಂದ ಈ ಹೊನ್ನಾರು ಆಚರಣೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರುತಿಳಿಸುತ್ತಾರೆ. ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಈ ವಿಶಿಷ್ಟ ಆಚರಣೆ ನೆರವೇರಿಸಿದರು.