ಕಾಠ್ಮಂಡು: ನೇಪಾಳದಲ್ಲಿ ನ.20ರಂದು ಸಂಸತ್ ಚುನಾವಣೆ ನಡೆಯಲಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ವೀಕ್ಷಕರಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ.
Advertisement
ಹೀಗಾಗಿ, ಅವರು ನ.22ರ ವರೆಗೆ ಆ ದೇಶದ ಪ್ರವಾಸದಲ್ಲಿ ಇರಲಿದ್ದಾರೆ. ನ.20ರ ಮತದಾನದಲ್ಲಿ 17.9 ಕೋಟಿ ಮಂದಿ ಮತದಾರರು 275 ಮಂದಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಇದಲ್ಲದೆ, 550 ಮಂದಿ ಸದಸ್ಯರನ್ನು ಪ್ರಾಂತೀಯ ಅಸೆಂಬ್ಲಿಗಳಿಗೆ ಕೂಡ ಆಯ್ಕೆ ಮಾಡಲಿದ್ದಾರೆ. ಸಂಸತ್ ಚುನಾವಣೆಯ ಫಲಿತಾಂಶ ಅತಂತ್ರವಾಗಿಯೇ ಇರಲಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ತಿಂಗಳ 8ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.