ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲಿ ತಯಾರಾಗುವ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಮೇಲೆ ನಿಯಂತ್ರಣ ಹೇರುವ ಅಧಿಕಾರ ರಾಜ್ಯ ಔಷಧ ನಿರ್ದೇಶ ನಾಲಯಗಳ ಬದಲಿಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಸಿಡಿಎಸ್‌ಸಿಒ)ಕ್ಕೆ ನೀಡುವ ಕುರಿತು ಕೇಂದ್ರ ಸರಕಾರ ಪ್ರಸ್ತಾಪಿಸಿದೆ.
ಸದ್ಯ ಇರುವ ಔಷಧಗಳು ಮತ್ತು ಸೌದರ್ಯವರ್ಧಕಗಳ ಕಾಯ್ದೆ 1940ಕ್ಕೆ ತಿದ್ದುಪಡಿ ತಂದು ಹೊಸ ಔಷಧ, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ವಿಧೇಯಕ 2023ರಲ್ಲಿ ಈ ಪ್ರಸ್ತಾಪ ಮಂಡಿಸಲಾಗಿದೆ. ಆದರೆ, ಔಷಧಗಳ, ಸೌಂದರ್ಯವರ್ಧಕಗಳ ಮತ್ತು ವೈದ್ಯಕೀಯ ಸಾಧನಗಳ ಮಾರಾಟವನ್ನು ನಿಯಂತ್ರಣ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾ ರಗಳ ವ್ಯಾಪ್ತಿಯಲ್ಲಿಯೇ ಮುಂದುವರಿಯ ಲಿದೆ ಎಂದು ಪರಿಷ್ಕೃತ ಕರಡು ವಿಧೇಯ ಕದಲ್ಲಿ ಉಲ್ಲೇಖೀಸಲಾಗಿದೆ. ಇದಲ್ಲದೆ, ಇ-ಫಾರ್ಮಸಿಯನ್ನು ನಿರ್ವ ಹಿಸುವ ಮತ್ತು ಆರಂಭಿಸುವ ನಿಟ್ಟಿನಲ್ಲಿ ಪರವಾನಗಿ ಪಡೆಯುವ ವ್ಯವಸ್ಥೆ, “ಆನ್‌ಲೈನ್ ಮೂಲಕ ಯಾವುದೇ ಔಷಧಗಳನ್ನು ಮಾರಾಟ, ಸಂಗ್ರಹ, ವಿತರಣೆ ನಿಯಮ ಗಳನ್ನು ಕೇಂದ್ರ ಸರಕಾರವೇ ಪರಿಶೀಲಿಸಿ ಜಾರಿಗೆ ತರಲಿದೆ’ ಎಂದು ಪ್ರತಿಪಾದಿಸ ಲಾಗಿದೆ. ಹೊಸ ವಿಧೇಯಕದಲ್ಲಿ ಆಯುಷ್ ಔಷಧಗಳ ಮಾರಾಟ ಮತ್ತು ನಿಯಂತ್ರಣ ವಿಚಾರಗಳ ಬಗ್ಗೆ ಪ್ರತ್ಯೇಕವಾಗಿಯೇ ಉಲ್ಲೇಖೀಸಲಾಗಿದೆ.
ಕರಡು ವಿಧೇಯಕವನ್ನು ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಿಗೆ ಕಳು ಹಿಸಿಕೊಡಲಾಗಿದೆ. ಜತೆಗೆ ಸಾರ್ವಜನಿಕರು, ಔಷಧೋದ್ಯಮ ಕ್ಷೇತ್ರದ ಪ್ರಮುಖರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.