Advertisement

ನಿತ್ಯಾನಂದ ಸ್ವಾಮಿಗೆ ಸಿಸಿಬಿ ನೋಟಿಸ್‌

12:07 PM Nov 20, 2018 | |

ಬೆಂಗಳೂರು: “ಗಾಂಜಾ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಂಡ ವ್ಯಕ್ತಿಯನ್ನು ನಾನು ಇದುವರೆಗೂ ನೋಡಿಲ್ಲ. ಜತೆಗೆ ಗಾಂಜಾ ಸೇವನೆ ವ್ಯಸನವಲ್ಲ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಸೋಮವಾರ ನೋಟಿಸ್‌ ಜಾರಿಗೊಳಿಸಿದ್ದಾರೆ.

Advertisement

ನಿತ್ಯಾನಂದ ಸ್ವಾಮಿಯ “ಗಾಂಜಾ’ ಹೇಳಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರಮ ಜರುಗಿಸುವಂತೆ ಕೋರಿ ಕನ್ನಡ ಚಳವಳಿ ನಾಗೇಶ್‌ ಎಂಬುವವರು ದೂರು ನೀಡಿದ್ದಾರೆ. ಅವರ ದೂರಿಗೆ ಸಂಬಂಧಿಸಿದಂತೆ ಮುಂದಿನ ಎರಡು ದಿನಗಳಲ್ಲಿ, ಮಾದಕ ದ್ರವ್ಯ ಘಟಕದ ಎಸಿಪಿ ಮೋಹನ್‌ ಕುಮಾರ್‌ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನಿತ್ಯಾನಂದ ಸ್ವಾಮಿ ಬಿಡದಿ ಆಶ್ರಮದಲ್ಲಿ ಇರದಿದ್ದ ಕಾರಣ, ಅವರ ಕಚೇರಿಗೆ ನೋಟಿಸ್‌ ನೀಡಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು. ಕೆಲ ದಿನಗಳ ಹಿಂದೆ ತನ್ನ ಆಶ್ರಮದಲ್ಲಿ ಪ್ರವಚನ ನೀಡಿರುವ ನಿತ್ಯಾನಂದ ಸ್ವಾಮಿ, “ಮದ್ಯ ಸೇವನೆ ವ್ಯಸನವಾಗಲಿದೆ. ಆದರೆ, ಗಾಂಜಾ ವ್ಯಸನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಏಕೆಂದರೆ ಅದೊಂದು ಮೂಲಿಕೆಯಷ್ಟೇ.

ಗಾಂಜಾ ಸೇವನೆಯಿಂದ ವ್ಯಸನ ಹೆಚ್ಚಾಗಿರುವುದನ್ನು ನಾನು ನನ್ನ ಜೀವನದಲ್ಲೇ ಕಂಡಿಲ್ಲ.  ಗಾಂಜಾ ಸೇವನೆಯಿಂದ ಮನುಷ್ಯ ಸ್ವತಂತ್ರನಾಗುತ್ತಾನೆ’ ಎಂದಿದ್ದರು. ಪ್ರವಚನದ ನಡುವೆಯೇ “ನಾನು ಸತ್ಯವನ್ನು ಮಾತ್ರವೇ ಹೇಳುತ್ತಿದ್ದೇನೆ. ಲಕ್ಷಾಂತರ ಜನರ ನಡುವಿನ ಸಂಪರ್ಕದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಹಾಗಂತ ನಾನು ಗಾಂಜಾ ಸೇವಿಸಿಲ್ಲ. ಅದನ್ನು ಪ್ರೋತ್ಸಾಹಿಸುವುದೂ ಇಲ್ಲ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next