Advertisement
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡಗಳು ಶನಿವಾರ ರಾತ್ರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಂದಿ ಬಾರ್, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಲೇಸ್ ಬಾರ್, ಇಂದಿರಾನಗರದ ಲಾಪ್c 38 ಹೆಸರಿನ ಡ್ಯಾನ್ಸ್ ಬಾರ್ ಹಾಗೂ ವೇಪರ್ ಬಾರ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಾನವ ಕಳ್ಳಸಾಗಾಣಿಕೆ ಮೂಲಕ ಕರೆತಂದಿದ್ದ ಮಹಿಳೆಯರನ್ನು ರಕ್ಷಿಸಿದ್ದಾರೆ.
Related Articles
Advertisement
ಹಾಗೇ, ವೇಪರ್ಸ್ ಡ್ಯಾನ್ಸ್ ಬಾರ್‌ನ ಮ್ಯಾನೇಜರ್‌ಗಳಾದ ನವೀನ್ ಕುಮಾರ್, ದಿಲೀಪ್ ಸಾಹು ಮತ್ತು ಸಂಜಯ್ ಎಂಬುವರನ್ನು ಬಂಧಿಸಿದ್ದು, ಮಾಲೀಕ ಅಕ್ಷತ್ ಪ್ರಸಾದ್ ತಲೆ ಮರೆಸಿಕೊಂಡಿದ್ದಾರೆ. ಮೆಹಂದಿ ಬಾರ್‌ನ ಬೌನ್ಸರ್‌ಗಳಾದ ಸೂರಜ್, ಅರ್ಜುನ್, ಸಂತೋಷ್ ಶೆಟ್ಟಿ ಸೇರಿದಂತೆ 6 ಜನರನ್ನು ದಾಳಿ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಬಾರ್‌ನಲ್ಲಿ ಕೆಲಸಕ್ಕಿದ್ದ 9 ಮಹಿಳೆಯರನ್ನು ರಕ್ಷಿಸಲಾಗಿದೆ.
ಜತೆಗೆ 2.09 ಲಕ್ಷ ರೂ. ನಗದು, 150 ಟೋಕನ್‌ಗಳು, 6 ಡಿವಿಆರ್, ಕಾರ್ಡ್ ಸ್ವೆ„ಪಿಂಗ್ ಮಷೀನ್ ಮತ್ತು ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಲೇಸ್ ಬಾರ್‌ನ ಸಿಬ್ಬಂದಿ ನಬಿಲ್ ಮತ್ತು ಆನಂದ ಎಂಬುವರನ್ನು ಬಂಧಿಸಲಾಗಿದ್ದು, ಬಾರ್‌ನಲ್ಲಿ ಬಲವಂತವಾಗಿ ದುಡಿಯುತ್ತಿದ್ದ 27 ಮಹಿಳೆಯರನ್ನು ರಕ್ಷಿಸಲಾಗಿದೆ. ಮಾಲೀಕ ನಹೀಮ್, ಅಬ್ದುಲ್ ಹ್ಯಾರಿಸ್, ಪರಮಾನಂದ, ಬ್ಯಾಂಡ್ ಲೀಡರ್ ರಮೇಶ್ ಎಂಬುವವರು ತಲೆ ಮರೆಸಿಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.