Advertisement

ಸಿಬಿಎಸ್‌ಇ ಫ‌ಲಿತಾಂಶ ಪ್ರಕಟ

10:52 AM May 03, 2019 | pallavi |

ಬೆಂಗಳೂರು: ಸಿಬಿಎಸ್‌ಇ 12 ತರಗತಿಯ ಫ‌ಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದ್ದು ಬೆಂಗಳೂರಿನ ಮಾರತ್‌ಹಳ್ಳಿಯ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಜೆಫಿನ್‌ ಬಿಜು ಮತ್ತು ಬನ್ನೇರುಘಟ್ಟ ಬಿಜಿಎಸ್‌ ನ್ಯಾಷನಲ್ ಪಬ್ಲಿಕ್‌ ಶಾಲೆ ಅನನ್ಯ ಆರ್‌.ಬುರಲಿ 493 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

ಹಾಗೆಯೇ ಇಂದಿರಾನಗರದ ಎನ್‌ಪಿಎಸ್‌ ಶಾಲೆಯ ವಿದ್ಯಾರ್ಥಿನಿ ಅಪರ್ಣಾ ಎ.ಗುಪ್ತೆ 492, ಪಿಎಸ್‌ಬಿಬಿ ಲರ್ನಿಂಗ್‌ ಲೀಡರ್‌ಶಿಪ್‌ ಅಕಾಡೆಮಿಯ ಪ್ರಕಾರ್‌ ಗೋಯಲ್ 492 ಅಂಕಗಳಿಸುವ ಮೂಲಕ 2ನೇ ಸ್ಥಾನ ಹಾಗೂ ಕೋರಮಂಗಲದ ನ್ಯಾಷನಲ್ ಪಬ್ಲಿಕ್‌ ಶಾಲೆ(ಎನ್‌ಪಿಎಸ್‌) ಕೌಶ್ತಭ್‌ ರಾಯ್‌ 491 ಅಂಕಗಳಿಸುವ ಮೂಲಕ 3ನೇಸ್ಥಾನ ಪಡೆದಿದ್ದಾರೆ.

ಸಿಎಂಆರ್‌ ನ್ಯಾಷನಲ್ ಪಬ್ಲಿಕ್‌ ಶಾಲೆ ವಿದ್ಯಾರ್ಥಿನಿ ಕೆ.ವರ್ಷ ಶೇ.96.6, ಎಂ.ಗುಹಾನ್‌ ಸಿದ್ಧಾರ್ಥ್-ಶೇ.96, ಎನ್‌.ಮೋಹಿತ್‌ ರಾಜು – ಶೇ.96, ಸಿಮ್ರಾನ್‌ ಗ್ರೇಸ್‌ ಸತ್ಯನಾರಾಯಣ ಶೇ.96.2 ಅಂಕಪಡೆದಿದ್ದಾರೆ.ಐಟಿಪಿಎಲ್ನ ಐಕ್ಯ ಶಾಲೆಯ ಸುದೀಪ್ತಾ ಶೇ.95, ಆಂಟೋ ಇಮ್ಯಾನ್ಯುಲ್ ಫೆಲಿಕ್ಸ್‌ ಶೇ.94.6, ಮನಾಲಿ ಯು.ತನ್ನ, 92.8, ಗೌರವ್‌ ಗೋವರ್ಧನ್‌- ಶೇ.92.4, ಇಶಾ ಆಭಿಜಿತ್‌ ಜೋಶಿ- ಶೇ.91.4, ಎಸ್‌.ಅಭಿಕ್‌- ಶೇ.91.4 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ನನ್ನಲ್ಲಿರುವ ಗೊಂದಲಗಳನ್ನು ಶಿಕ್ಷಕರಲ್ಲಿ ಕೇಳುತ್ತಿದ್ದೆ. ಗುರುಗಳು ಗೊಂದಲಗಳನ್ನು ಬಗೆಹರಿಸುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವಂತಾಯಿತು.
●ಜೆಫಿನ್‌ ಬಿಜು

ನನ್ನ ಪಾಲಕರು ಹೆಚ್ಚಿಗೆ ಓದುವಂತೆ ಒತ್ತಡ ಹಾಕಲಿಲ್ಲ.ಅಪ್ಪನ ಆಸೆಯಂತೆ ನಾನು ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ.
●ಕೌಶ್ತುಭಾ ರಾಯ್‌

Advertisement

ತರಗತಿಯಲ್ಲಿ ಚೆನ್ನಾಗಿ ಪಾಠ ಕೇಳುತ್ತಿದ್ದೆ ಮತ್ತೆ ಮನೆಯಲ್ಲಿ ಓದುತ್ತಿದ್ದೆ. ಇದು ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು. ಫ‌ಲಿತಾಂಶ ಖುಷಿಕೊಟ್ಟಿದೆ.
●ಅಪರ್ಣಾ ಎ. ಗುಪ್ತೆ

ಪ್ರತಿ ನಿತ್ಯ 8 ರಿಂದ 10 ತಾಸು ವ್ಯಾಸಂಗ ಮಾಡುತ್ತಿದ್ದೆ. ಜೆಇಇ ಮೇನ್ಸ್‌, ಸಿಇಟಿ, ವಿಐಟಿ, ಎಸ್‌ಆರ್‌ಎಂ ಎಲ್ಲ ಪರೀಕ್ಷೆಗಳನ್ನು ಬರೆದಿದ್ದೇನೆ. ಫಲಿತಾಂಶ ಬಂದ ಮೇಲೆ ಮುಂದಿನ ವ್ಯಾಸಂಗದ ಬಗ್ಗೆ ಆಲೋಚಿಸುತ್ತೇನೆ.
●ಅನನ್ಯ ಬುರಲಿ

Advertisement

Udayavani is now on Telegram. Click here to join our channel and stay updated with the latest news.

Next