ಹೊಸದಿಲ್ಲಿ : ಸಿಬಿಎಸ್‌ಇ 10ನೇ ತರಗತಿಯ ಗಣಿತ ಪರೀಕ್ಷೆಯನ್ನು ಪುನರಪಿ ನಡೆಸಲಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದ್ದು ಆ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ಭಾರೀ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಕಳೆದ ಮಾರ್ಚ್ 28ರಂದು ಸಿಬಿಎಸ್‌ಇ 10ನೇ ತರಗತಿ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು.
“ಸಹಸ್ರಾರು ವಿದ್ಯಾರ್ಥಿಗಳ ಪರಮೋಚ್ಚ ಹಿತಾಸಕ್ತಿಯನ್ನು ಕಾಪಿಡುವ ಸಲುವಾಗಿ ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆಯನ್ನು ದಿಲ್ಲಿ ಎನ್‌ಸಿಆರ್ ಮತ್ತು ಹರಿಯಾಣದಲ್ಲಿ ಕೂಡ ಪುನರಪಿ ನಡಸದಿರಲು ನಿರ್ಧರಿಸಲಾಗಿದೆ’ ಎಂದು ಭಾರತ ಸರಕಾರದ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ತಿಳಿಸಿದರು.
ಇದಕ್ಕೆ ಮೊದಲು ಸಿಬಿಎಸ್‌ಇ ಪುನರ್ ಪರೀಕ್ಷೆ ಬಗೆಗಿನ ಅರ್ಜಿಗಳ ಮೇಲಿನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ವಿಷಯವನ್ನು ಎ.4ರಂದು ಪುನಃ ವಿಚಾರಣೆ ಎತ್ತಿಕೊಳ್ಳಲಾಗುವುದು ಎಂದು ಹೇಳಿತ್ತು.
Related Articles
ಆದರೆ ಈ ನಡುವೆ ಸಿಬಿಎಸ್‌ಇ 10ನೇ ಗಣಿತ ಪರೀಕ್ಷೆಯನ್ನು ಪುನರಪಿ ನಡೆಸದಿರುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡು ಸಹಸ್ರಾರು ವಿದ್ಯಾರ್ಥಿಗಳಿಗೆ ಭಾರೀ ದೊಡ್ಡ ರಿಲೀಫ್ ನೀಡಿತು.