Advertisement

ಸಿಬಿಎಸ್‌ಇ: ಡಿಜಿಟಲ್‌ ಹೆಜ್ಜೆಯಾಗಿರುವ ಪರೀಕ್ಷಾ ಸಂಗಮ್‌ ಆರಂಭ

12:13 AM Jul 02, 2022 | Team Udayavani |

ನಾಗಪುರ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ ಪರೀಕ್ಷೆಗಳಿಗೆ ಸಂಬಂಧಿಸಿದ ಅತೀ ದೊಡ್ಡ ಡಿಜಿಟಲ್‌ ಹೆಜ್ಜೆಯಾಗಿರುವ “ಪರೀಕ್ಷಾ ಸಂಗಮ್‌’ ಶುಕ್ರವಾರ ಆರಂಭಗೊಂಡಿದೆ.

Advertisement

ಇನ್ನು ಸಿಬಿಎಸ್‌ಇ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೋಂದಣಿಯಿಂದ ತೊಡಗಿ ಫ‌ಲಿತಾಂಶ ಘೋಷಣೆಯವರೆಗೆ ಎಲ್ಲವೂ ಈ ವೆಬ್‌ಸೈಟ್‌ ಮೂಲಕವೇ ನಡೆಯಲಿದೆ.

ಶಾಲೆ, ಸಿಬಿಎಸ್‌ಇ ಪ್ರಾಂತೀಯ ಕಚೇರಿಗಳು ಮತ್ತು ಕೇಂದ್ರ ಕಚೇರಿ- ಈ ಮೂರೂ ಅಂಗಗಳ ಪರೀಕ್ಷೆ ಸಂಬಂಧಿ ಪ್ರಕ್ರಿಯೆಗಳನ್ನು ಪರೀಕ್ಷಾ ಸಂಗಮ್‌ ಏಕತ್ರಗೊಳಿಸಲಿದೆ.

ಕೆಲವೇ ವಾರಗಳಲ್ಲಿ ಸಿಬಿಎಸ್‌ಇ 10, 12 ಫ‌ಲಿತಾಂಶ ಪ್ರಕಟವಾಗಲಿದ್ದು, ಪರೀಕ್ಷಾ ಸಂಗಮ್‌ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಉತ್ತರಪತ್ರಿಕೆಗಳ ಛಾಯಾಪ್ರತಿ, ಪುನರ್‌ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಎಲ್ಲವೂ ಇದರ ಮೂಲಕ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next