Advertisement

ಸಿಬಿಎಸ್‌ಇ ಪರೀಕ್ಷೆಗೆ ಬದಲಾವಣೆ

12:07 AM Jul 15, 2022 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫ‌ಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿರುವಂತೆಯೇ, ಮುಂದಿನ ವರ್ಷದಿಂದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟಿನ ಬದಲಾವಣೆ ತರಲು ಸಿಬಿಎಸ್‌ಇ ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ, ಈಗಾಗಲೇ ಕೆಲವು ಶಾಲೆಗಳಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. 2024ರಿಂದ ಎಲ್ಲ ಶಾಲೆಗಳೂ ಇದನ್ನು ಅನುಸರಿಸಬೇಕಿದೆ.

Advertisement

ಏನೇನು ಬದಲಾವಣೆ? :

  • ಎಲ್ಲ ವಿಷಯಗಳಿಗೂ (ಪ್ರಾಕ್ಟಿಕಲ್‌ ಪರೀಕ್ಷೆ ಇಲ್ಲದಂತಹ ವಿಷಯಗಳಿಗೂ) ಶೇ.20ರಷ್ಟು ಆಂತರಿಕ ಮೌಲ್ಯಾಂಕನ ನೀಡಲಾಗುತ್ತದೆ. ಶಿಕ್ಷಕರು ಮತ್ತು ಹೆತ್ತವರು ಮಾಡುವ ಮೌಲ್ಯಮಾಪನ­ವನ್ನು ಆಧರಿಸಿ ಈ ಅಂಕ ನೀಡಲಾಗುತ್ತದೆ.
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡುವ ಸಲುವಾಗಿ ಪ್ರಶ್ನೆಗಳ ಸಂಖ್ಯೆಯನ್ನು ಶೇ.33ರಷ್ಟು ಹೆಚ್ಚಳ ಮಾಡಲಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ದೀರ್ಘ‌ವಾಗಿದ್ದರೂ ವಿದ್ಯಾರ್ಥಿಗಳಿಗೆ ಉತ್ತರಿಸಲು ಬಹು ಆಯ್ಕೆಗಳು ಸಿಗುತ್ತವೆ.
  • ಪ್ರಶ್ನೆಗಳು ಕೌಶಲ ಆಧರಿತ ಮತ್ತು ಸಾಮರ್ಥ್ಯ ಆಧರಿತವಾಗಿದ್ದು, ವಿದ್ಯಾರ್ಥಿಗಳು ವಿಮಶಾìತ್ಮಕವಾಗಿ ಚಿಂತನೆ ನಡೆಸಲು ಅವಕಾಶ ಕಲ್ಪಿಸಲಾಗು­ತ್ತದೆ. ಅವರು ತಾವು ಕಲಿತಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಆಲೋಚಿಸಿ, ಪ್ರಶ್ನೆಗಳಿಗೆ ಉತ್ತರಿಸಬೇಕಾ­ಗುತ್ತದೆ. ಈ ಉತ್ತರಗಳು ಪುಸ್ತಕದಲ್ಲಿ ಸಿಗುವುದಿಲ್ಲ.
  • 3, 5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಮೌಲ್ಯಮೌಪನ ಸರ್ವೇ ನಡೆಸಲಾಗುತ್ತದೆ.
  • ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಶಿಕ್ಷಕರು, ಹೆತ್ತವರು, ಸಮಾನ ಸ್ಕಂಧ ವಿದ್ಯಾರ್ಥಿಗಳ ಗುಂಪು ಮೌಲ್ಯಮಾಪನ ಮಾಡಲಿದೆ. ಜತೆಗೆ ಆಯಾ ವಿದ್ಯಾರ್ಥಿಯೂ ತನ್ನನ್ನು ತಾನೇ ಮೌಲ್ಯಮಾಪನ ಮಾಡುವ ಅವಕಾಶವಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next