Advertisement

ಸೋನಾಲಿ ಫೋಗಟ್ ಸಾವಿನ ಸಿಬಿಐ ತನಿಖೆ : ಹೋಟೆಲ್‌ ಕೊಠಡಿಗಳ ಶೋಧ

02:35 PM Sep 17, 2022 | Team Udayavani |

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ತಂಡವು ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಬಿಜೆಪಿ ನಾಯಕಿ ಮತ್ತು ಅವರ ಪುರುಷ ಸಹಾಯಕರು ತಂಗಿದ್ದ ಹೋಟೆಲ್‌ನ ಕೊಠಡಿಗಳನ್ನು ಶೋಧಿಸಿದೆ.

Advertisement

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮುನ್ನ ತನಿಖೆ ನಡೆಸುತ್ತಿದ್ದ ಗೋವಾ ಪೊಲೀಸರು, ತನಿಖೆಯ ಭಾಗವಾಗಿ ಹೋಟೆಲ್ ನಲ್ಲಿನ ಕೊಠಡಿಗಳನ್ನು ಸೀಲ್ ಮಾಡಿದ್ದರು.ಸಿಬಿಐ ತಂಡವು ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಸೋನಾಲಿ ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ಪರೀಕ್ಷಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳು, ವೈದ್ಯರೊಂದಿಗೆ ಸಂವಾದ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹರಿಯಾಣದಲ್ಲಿರುವ ಸೋನಾಲಿ ಫೋಗಟ್ ಸಹೋದರರ ಹೇಳಿಕೆಯನ್ನು ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ದಾಖಲಿಸಿಕೊಂಡಿದೆ.

ಇದನ್ನೂ ಓದಿ : ನೇಪಾಳದಲ್ಲಿ ಭೂಕುಸಿತ : 13 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ನಾಪತ್ತೆ, ರಕ್ಷಣಾ ತಂಡ ದೌಡು

ಕಳೆದ ತಿಂಗಳು ಗೋವಾದಲ್ಲಿ 43 ರ ಹರೆಯದ ಸೋನಾಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದನ್ನು ಕೊಲೆ ಎಂದು ಪರಿಗಣಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪುರುಷ ಸಹಾಯಕರಾದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಸೇರಿ ಇತರ ಮೂವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next