ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋವಿಡ್ ನಕಲಿ ಪರೀಕ್ಷಾ ಕಿಟ್‌ಗಳು ಚಲಾವಣೆಯಲ್ಲಿವೆ ಎಂದು ಸಿಬಿಐ, ರಾಜ್ಯ ಪೊಲೀಸ್ ಇಲಾಖೆಗಳಿಗೆ ಎಚ್ಚರಿಸಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಇಂಟರ್‌ಪೊಲ್ ಈ ಬಗ್ಗೆ ಸಿಬಿಐಗೆ ಮಾಹಿತಿ ರವಾನಿ ಸಿದ್ದು, ಪರೀಕ್ಷಾ ಕಿಟ್ ಉತ್ಪಾದಿಸುವ ಸಂಸ್ಥೆಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಭಾರತದ ಸಂಸ್ಥೆ ಅಥವಾ ಹಂಚಿಕೆದಾರರ ಕುರಿತೂ ಅದು ಮಾಹಿತಿ ನೀಡಿಲ್ಲ.
ಆದರೆ, ಆಮದು ಪರೀಕ್ಷಾ ಕಿಟ್‌ಗಳನ್ನೇ ನಂಬಿಕೊಂಡಂಥ ಭಾರತದಂಥ ದೇಶಗಳ ತನಿಖಾ ದಳಕ್ಕೆ ಇಂಟರ್‌ಪೊಲ್, ನಕಲಿ ಕಿಟ್‌ಗಳ ಹಾವಳಿ ಕುರಿತು ಮಾಹಿತಿ ನೀಡಿದೆ.
ಕೋವಿಡ್ 19 ಅಪ್ಪಳಿಸಿದ ಬಳಿಕ, ಜಾಗತಿಕ ಮಾರುಕಟ್ಟೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ನಕಲಿ ಔಷಧ- ವೈದ್ಯಕೀಯ ಸಾಮಗ್ರಿಗಳ ಉತ್ಪಾದನೆಯ ಅಂಶಗಳನ್ನೂ ಇಂಟರ್‌ಪೋಲ್ ಪತ್ತೆಹಚ್ಚಿದೆ.
ಅದೇ ರೀತಿ, ದಿ ಲ್ಯಾನ್ ಎನ್ನುವ ತನಿಖಾ ಸಂಸ್ಥೆ ಕೂಡ, ಕೋವಿಡ್ ನೆಪದಲ್ಲಿ ಅಡ್ಡದಾರಿ ಹಿಡಿಯುವ ಸಂಸ್ಥೆಗಳ ಬಗ್ಗೆ ಎಚ್ಚರಿಸಿದೆ.