ಬಳ್ಳಾರಿ: ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಿಸಲು ಜಲಾಶಯಗಳಿಂದ ಪೈಪ್‌ಲೈನ್ ಮೂಲಕ ಕೆರೆಗಳನ್ನು ತುಂಬಿಸಲು ಚಿಂತನೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತೋರಣಗಲ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ-ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ
ಬಹಳಷ್ಟು ಸಮಸ್ಯೆಯಿದ್ದು, ಅಲ್ಲಿರುವ ಕೆರೆಗಳಿಗೆ ಪೈಪ್ ಲೈನ್ ಮೂಲಕ ಶೀಘ್ರವೇ ನೀರು ಹರಿಸಲಾಗುವುದು.
ಅಲ್ಲದೆ ಸಮಾನಾಂತರ ಜಲಾಶಯಗಳನ್ನು ನಿರ್ಮಿಸುವುದು ಕೂಡ ಬರ ಪರಿಸ್ಥಿತಿ ಎದುರಿಸಲು ಪರ್ಯಾಯ ಯೋಜನೆಯಾಗಿದೆ. ಈಗಾಗಲೇ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯ ಸಮಾನಾಂತರ ಜಲಾ ಶಯ ನಿರ್ಮಿಸುವ ಯೋಜನೆ ರೂಪುಗೊಳ್ಳುತ್ತಿದೆ. ರಾಜ್ಯದ ಆಲಮಟ್ಟಿ ಹಾಗೂ ನಾರಾಯಣ ಪುರ ಜಲಾಶಯಗಳು ಭರ್ತಿಯಾಗಿದ್ದು, ಆಲಮಟ್ಟಿಯಲ್ಲಿ ಇದೇ ಆ.18ರಂದು ಪೂಜೆ ಸಲ್ಲಿಸಲಿದ್ದೇನೆ. ಳೆ ಕಡಿಮೆ ಆಗಿರುವ ಕುರಿತು ವರದಿಗಳು ಬಂದಿದ್ದು, ಪ್ರಕೃತಿ ವಿಕೋಪವಾದರೆ ನಿಭಾಯಿಸುವುದು ಕಷ್ಟ. ರಾಜ್ಯದಲ್ಲಿ
ಮಳೆ ಬೀಳದ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕಾರ್ಯ ಚುರುಕುಗೊಳಿಸಲಾಗುವುದು ಎಂದರು.