Advertisement

Cauvery ತುಂಬಿ ಹರಿಯಿತು; ಮೆಟ್ಟೂರು ಅಣೆಕಟ್ಟು ಭರ್ತಿ: ಗೇಟು ತೆರೆಯಲು ತ.ನಾಡು ಸೂಚನೆ

01:52 AM Jul 29, 2024 | Team Udayavani |

ಚೆನ್ನೈ: ಕರ್ನಾಟಕದ ಜೀವನದಿ ಕಾವೇರಿ ತುಂಬಿ ಹರಿಯುತ್ತಿರುವ ಕಾರಣ ತಮಿ ಳುನಾಡಿಗೆ ಬಿಡುಗಡೆ ಯಾಗು ತ್ತಿರುವ ನೀರಿನ ಪ್ರಮಾಣವೂ ಹೆಚ್ಚಳವಾಗಿದ್ದು, ಮೆಟ್ಟೂರು ಅಣೆಕಟ್ಟು ಭರ್ತಿಯಾಗಿದೆ. 120 ಅಡಿ ಎತ್ತರದ ಅಣೆಕಟ್ಟು 109.2 ಅಡಿ ತುಂಬಿದೆ.

Advertisement

ಒಳಹರಿವು ಹೆಚ್ಚಾಗಿರುವ ಕಾರಣ ಅಣೆಕಟ್ಟನ್ನು ಓಪನ್‌ ಮಾಡುವಂತೆ ರಾಜ್ಯ ಸರಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉತ್ತಮ ಮಳೆ ಯಾಗಿ ರುವ ಕಾರಣ ಕರ್ನಾಟಕ 1.48 ಲಕ್ಷ ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ.

ಮುಂದಿನ 3 ದಿನಗಳ ಕಾಲ ಕರ್ನಾ ಟಕ ದಿಂದ ಹೆಚ್ಚುವರಿ ನೀರು ಬಿಡುಗಡೆ ಯಾ ಗುವ ಮುನ್ಸೂಚನೆ ಇರುವ ಕಾರಣ, ಮೆಟ್ಟೂರು ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿದೆ.

ಪ್ರತಿಭಟನೆಗೆ ತೆರಳುತ್ತಿದ್ದವರು ಪೊಲೀಸ್‌ ವಶಕ್ಕೆ
ನರ್ಮದಾಪುರ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಭಟನೆ ನಡೆಸಲು ದಿಲ್ಲಿಗೆ ರೈಲಿನಲ್ಲಿ ತೆರಳುತ್ತಿದ್ದ ತಮಿಳುನಾಡಿನ 65ಕ್ಕೂ ಹೆಚ್ಚು ರೈತರನ್ನು ಮಧ್ಯಪ್ರದೇಶದ ನರ್ಮದಾಪುರ ರೈಲು ನಿಲ್ದಾಣ ದಲ್ಲಿ ಇಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ಪಡೆದವರಲ್ಲಿ 12 ಮಹಿಳೆಯರೂ ಸೇರಿದ್ದಾರೆ. 100ಕ್ಕೂ ಅಧಿಕ ಮಂದಿ ರೈತರು ಇದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next