Advertisement
ಕಾವೇರಿ ಕೊಳ್ಳದ ರೈತರು ಬೆಳೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸುತ್ತಿರುವುದರಿಂದ ಅಗತ್ಯವಿದ್ದಷ್ಟು ನೀರಿನ ಸಂಗ್ರಹವಾಗದ ಹಿನ್ನೆಲೆಯಲ್ಲಿ ಸರ್ಕಾರ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವ ಬದಲು ಸರ್ವ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲು ನಿರ್ಧರಿಸಿದೆ. ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆ ಕೂಡ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗುವುದಾಗಿ ಮುನ್ಸೂಚನೆ ನೀಡಿರುವ ಕಾರಣ ಒಂದು ವಾರ ಕಾದು ನೋಡಿ ತೀರ್ಮಾನಕ್ಕೆ ಬರಲು ಶುಕ್ರವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಹೇಮಾವತಿ ಜಲಾಶಯದಿಂದ ಹೈ ಲೆವೆಲ್ ಕೆನಾಲ್‌ಗಳಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಬಿಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ಹತ್ತು ದಿನಗಳ ವರೆಗೆ ಒಂದು ಟಿಎಂಸಿ ನೀರು ಹರಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಆ ನೀರನ್ನು ರೈತರು ಬೆಳೆಗಳಿಗೆ ಬಳಸಿಕೊಳ್ಳುವಂತಿಲ್ಲ. ಜನರು ಮತ್ತು ಪ್ರಾಣಿಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಕೂಡ ವಸ್ತು ಸ್ಥಿತಿಯನ್ನು ಸಭೆಯ ಗಮನಕ್ಕೆ ತಂದಿದ್ದಾರೆ. ಅವರ ಮನವಿಯ ಹಿನ್ನೆಲೆಯಲ್ಲಿ 10 ದಿನಗಳಿಗೆ ಮಾತ್ರ ಕುಡಿಯಲು ನೀರು ಹರಿಸಲಾಗುವುದು ಎಂದು ಎಂ.ಬಿ. ಪಾಟೀಲ್ ತಿಳಿಸಿದರು.ನಾಲ್ಕು ಜಲಾಶಯಗಳ ಸದ್ಯದ ಸ್ಥಿತಿ 43 ಟಿಎಂಸಿ ನೀರು ಸಂಗ್ರಹ ಆಗಸ್ಟ್ ಮೊದಲ ವಾರಕ್ಕೆ 122 ಟಿಎಂಸಿ ಸಂಗ್ರಹವಾಗಬೇಕಿತ್ತು.
Related Articles
Advertisement