Advertisement

ರೈಲ್ವೆ ಟಿಕೆಟ್ ಪಡೆಯುವಾಗ ಬುಕಿಂಗ್ ಕ್ಲರ್ಕ್ ನಿಂದ ವಂಚನೆ ; ವೈರಲ್ ವಿಡಿಯೋ

04:02 PM Nov 25, 2022 | Team Udayavani |

ನವ ದೆಹಲಿ : ಮುಂದಿನ ಬಾರಿ ನೀವು ರೈಲ್ವೆ ಟಿಕೆಟ್ ಪಡೆಯುವಾಗ ಜಾಗರೂಕರಾಗಿರಿ. ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ನಡೆದ ನಗದು ಹಗರಣದ ನಿದರ್ಶನವನ್ನು ಸಾಮಾಜಿಕ ಜಾಲತಾಣಗಳು ಬೆಳಕಿಗೆ ತಂದಿವೆ.

Advertisement

ಟ್ವಿಟರ್‌ನಲ್ಲಿ ರೈಲ್ ವಿಷ್ಪರ್ಸ್ ಹಂಚಿಕೊಂಡ ವೈರಲ್ ವಿಡಿಯೋ ಕ್ಲಿಪ್, ನಗದು ಆಧಾರಿತ ವಹಿವಾಟಿನ ಸಮಯದಲ್ಲಿ ರೈಲ್ವೆ ಉದ್ಯೋಗಿಯೊಬ್ಬ ಗ್ರಾಹಕರನ್ನು ಬುದ್ಧಿವಂತಿಕೆಯಿಂದ ವಂಚಿಸುವದನ್ನು ತೋರಿಸುತ್ತದೆ. ಬುಕಿಂಗ್ ಕ್ಲರ್ಕ್ ರೂ. 500 ಸ್ವೀಕರಿಸುತ್ತಾನೆ ಆದರೆ ಪ್ರಯಾಣಿಕರನ್ನು ವಂಚಿಸಲು ಪ್ರಯತ್ನಿಸುವ ಮೋಸದ ತಂತ್ರಗಳನ್ನು ಬಳಸುತ್ತಾನೆ.

ಗ್ರಾಹಕರು ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಆಸನಕ್ಕಾಗಿ ಪಾವತಿಸಲು 500 ರೂ. ನೋಟು ನೀಡುತ್ತಾರೆ ಅದನ್ನು ವಂಚನೆಯಿಂದ ಬುಕಿಂಗ್ ಕ್ಲರ್ಕ್ ಜೇಬಿನಿಂದ 20 ನೋಟು ತೆಗೆದು 125 ರೂಪಾಯಿ ಟಿಕೆಟ್ ನೀಡಲು ಮತ್ತೊಮ್ಮೆ ಹಣ ಕೇಳುತ್ತಾನೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ನೋಡಿದ ನಂತರ ಇಲಾಖೆಗೆ ಈ ವಿಷಯ ತಿಳಿದಿದ್ದು. “ನೌಕರನನ್ನು ವಜಾ ಮಾಡಲಾಗಿದೆ ಮತ್ತು ಅವನ ವಿರುದ್ಧ ಶಿಸ್ತಿನ ಕ್ರಮಗಳನ್ನು ಪ್ರಾರಂಭಿಸಲಾಗಿದೆ” ಎಂದು ಡಿ ಆರ್ ಎಂ ದೆಹಲಿ ಟ್ವೀಟ್ ಮಾಡಿದೆ.

Advertisement

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next