Advertisement
ಖಚಿತ ಮಾಹಿತಿ ಮೇರೆಗೆ ಉಪನಿರೀಕ್ಷಕ ರಫೀಕ್ ಎಂ. ಅವರು ಸಿಬಂದಿ ಜತೆಯಲ್ಲಿ ಕೊಳ್ಕೆಬೈಲು ಜಂಕ್ಷನ್ ಬಳಿ ಅನುಮಾನದ ಮೇರೆಗೆ ಬೈಕ್ ಹಾಗೂ ಬೊಲೆರೋ ಪಿಕ್‌ಅಪ್ ವಾಹನವನ್ನು ತಡೆದರು. ಕೂಡಲೇ ಅದರ ಚಾಲಕರು ವಾಹನವನ್ನು ಚಾಲನೆ ಸ್ಥಿತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಪಿಕಪ್ ವಾಹನ ಚರಂಡಿಗೆ ಬಿದ್ದಿದ್ದು, ಅದನ್ನು ಪರಿಶೀಲಿಸಿದಾಗ ಅಕ್ರಮ ಪತ್ತೆಯಾಗಿದೆ.
ಚರಂಡಿಗೆ ಬಿದ್ದ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣು ಕರು, ಎರಡು ಗಂಡು ಕರು ಸಹಿತ ಮೂರು ಜಾನುವಾರುಗಳು ಮೃತಪಟ್ಟಿದ್ದು, 3 ದನ, 6 ಗಂಡು ಕರು ಮತ್ತು 2 ಹೆಣ್ಣು ಕರುಗಳ ಸಹಿತ 11 ಜಾನುವಾರುಗಳು ಜೀವಂತವಾಗಿ ಪತ್ತೆಯಾಗಿದೆ. ಅನಂತರ ಅವುಗಳನ್ನು ರಕ್ಷಿಸಿ ಠಾಣೆಗೆ ತರಲಾಯಿತು. ಕಳವು ಶಂಕೆ
ಒಂದು ದನದ ಕಿವಿಯಲ್ಲಿ ಟಿಕ್ಕಿ ಇದೆ. ಹೀಗಾಗಿ ಜಾನುವಾರುಗಳನ್ನು ಕದ್ದು ತಂದಿರಬಹುದು ಎನ್ನಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.