ಬೆಂಗಳೂರು: ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು, ವಿವಿಗಳ ಕುಲಸಚಿವರು, ಆಡಳಿತಾಧಿಕಾರಿಗಳನ್ನು ಬದಲಾವಣೆ ಮಾಡಿರುವ ರಾಜ್ಯ ಸರಕಾರ, 25 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಮಹೇಶ್ ಚಂದ್ರ ಅವರನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಹಾಗೂ ಎ.ಇ. ರಘು ಅವರನ್ನು ದಕ್ಷಿಣ ಕನ್ನಡ ಜಿ.ಪಂ. ಉಪ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ರಾಜ್ಯ ಪ್ರತಿನಿಧಿ-2 ಆಗಿ ನಿಯುಕ್ತಗೊಳಿಸಿದ್ದರೆ, ಪಿ.ಎಸ್. ಕಾಂತರಾಜ್ ಅವರನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ನಿಯುಕ್ತಿಗೊಳಿಸಿದ್ದು, ಡಾ| ಎಸ್. ನಾಗರಾಜ್ ಅವರನ್ನು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿದೆ.
ಉಳಿದಂತೆ ವಿಜಯ ಈ. ರವಿಕುಮಾರ್-ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಜಂಟಿ ನಿರ್ದೇಶಕ (ಆಡಳಿತ), ಶಂಕರಗೌಡ ಎಸ್. ಸೋಮನಾಳ-ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ, ಡಿ.ಬಿ.ನಟೇಶ್-ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆ ಬೋಧಕ, ಮಮತಾ ಹೊಸಗೌಡರ-ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕಿ, ಡಾ| ಎನ್.ಆರ್. ಗೀತಾ-ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಆರ್. ಪ್ರತಿಭಾ-ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದ ಮುಖ್ಯ ಆಡಳಿತಾಧಿಕಾರಿ, ರಾಮಚಂದ್ರ ಗಡಾದೆ-ರಾಣಿಚನ್ನಮ್ಮ ವಿವಿ ಕುಲಸಚಿವ (ಆಡಳಿತ), ರಾಜಶೇಖರ ಡಂಬಳ-ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಜಿ. ನಳಿನಾ-ದಾವಣಗೆರೆ ಮಹಾನಗರ ಪಾಲಿಕೆ ಉಪ ಆಯುಕ್ತೆ (ಆಡಳಿತ), ಹೊಟೇಲ್ ಶಿವಪ್ಪ-ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಆಡಳಿತಾಧಿಕಾರಿ, ಜಿ.ಎಚ್. ನಾಗಹನುಮಯ್ಯ-ನೆಫೊÅà ಯುರಾಲಜಿ ಸಂಸ್ಥೆ ಆಡಳಿತಾಧಿಕಾರಿ ಹಾಗೂ ಅನುರಾಧಾ ವಸ್ತ್ರದ್ ಅವರನ್ನು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಸಚಿವೆಯಾಗಿ ವರ್ಗಾಯಿಸಿದೆ.
ಎಂ.ಪಿ. ಮಾರುತಿ-ಹಂಪಿ ವಿಶ್ವ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬಿ.ಆರ್. ರೂಪಾ-ಮೈಸೂರಿನ ಕಾಡಾ ಉಪ ಆಡಳಿತಾಧಿಕಾರಿ, ರವೀಂದ್ರ ಕರಿಲಿಂಗಣ್ಣವರ್-ಬೆಳಗಾವಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ (ಭೂ ನಿರ್ವಹಣೆ ಮತ್ತು ಯೋಜನೆ), ಎಚ್.ಜಿ. ಚಂದ್ರಶೇಖರಯ್ಯ- ಸಾಮಾಜಿಕ ಮತ್ತು ಅರ್ಥಿಕ ಬದಲಾವಣೆ ಸಂಸ್ಥೆ ರಿಜಿಸ್ಟ್ರಾರ್, ಎಚ್.ಬಿ. ಚನ್ನಪ್ಪ-ಹಾವೇರಿ ಉಪ ವಿಭಾಗಾಧಿಕಾರಿ, ಪಿ.ಕೆ. ಬಿನೋಯ್-ರಾಮನಗರ ಉಪವಿಭಾಗಾಧಿಕಾರಿ, ಪ್ರವೀಣ್ ಜೈನ್-ಬೆಳಗಾವಿ ನಗರಾ ಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಯನ್ನಾಗಿ ಸರಕಾರ ವರ್ಗಾವಣೆ ಮಾಡಿದೆ.