Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲೇನಹೊಸಹಳ್ಳಿ, ಕೆ.ಜೆ.ಹಬ್ಬನಕುಪ್ಪೆ, ಚಂದನಗಿರಿ, ಕೋಣನಹೊಸಹಳ್ಳಿ, ಕೊಳವಿಗೆ,ನೇರಳಕುಪ್ಪೆ, ಕಚುವಿನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಹಾಜರಾತಿ ಕಡ್ಡಾಯವಾಗಿದ್ದು, ರೆತರು ಕಷ್ಟಪಟ್ಟು ಬೆಳೆದಿರುವ ಮಾವಿನ ಮರಗಳು, ಕಾಫಿ,ಮೆಣಸು, ಮರಗೆಣಸು, ಶುಂಠಿ,ಜೋಳ ಸೇರಿದಂತೆ ನೂರಾರು ಎಕರೆ ಪ್ರದೇಶದ ಬೆಳೆಗಳು ಆನೆಗಳ ಪಾಲಾಗುತ್ತಿವೆ.
Related Articles
ವೀರನಹೊಸಹಳ್ಳಿ ಗೇಟ್‌ನಿಂದ ಕೊಳುವಿಗೆವರೆಗೆ ಮಾತ್ರ ರೆಲುಕಂಬಿಯ ತಡೆಗೋಡೆ ನಿರ್ಮಿಸಿದ್ದು, ಆಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣದಲ್ಲಿದೆ, ಆದರೆ ಕೋಣನಹೊಸಹಳ್ಳಿಯಿಂದ ಅಳ್ಳೂರಿನವರೆಗೆ ತಡೆಗೋಡೆ ಇಲ್ಲದೆ ಆನೆಗಳು ನದಿಯನ್ನು ದಾಟಿ ಆರಾಮವಾಗಿ ಹೊರಬರುತ್ತಿವೆ.ರೆತರ ಗೋಳು ಅರಣ್ಯ ರೋಧನವಾಗಿದೆ.
Advertisement
ರೆಲು ಕಂಬಿ ತಡೆಗೋಡೆ ನಿರ್ಮಿಸುವವರೆಗಾದರೂ ನಿಯಮಿತವಾಗಿ ಆನೆಗಳ ದಾಟದಂತೆ ಕಾವಲು ಹಾಕಬೇಕು,ನಷ್ಟಕ್ಕೆ ತಕ್ಕ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ರೆತರು ಎಚ್ಚರಿಸಿದ್ದಾರೆ.