Advertisement

ಧರ್ಮದ ಹೆಸರಿನಲ್ಲಿ ಜಾತಿ ಒಡೆಯಬಾರದು: ಈಶ್ವರಖಂಡ್ರೆ

06:08 PM Jun 21, 2022 | Team Udayavani |

ಕೆ.ಆರ್‌.ನಗರ: ಧರ್ಮ ಎಂದರೇನು ಎಂಬುದನ್ನೇ ತಿಳಿಯದವರು ಧರ್ಮದ ಹೆಸರಿನಲ್ಲಿ ಜಾತಿಗಳನ್ನು ಒಡೆದಾಳುತ್ತಿದ್ದು, ಇದರಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರಖಂಡ್ರೆ ಹೇಳಿದರು.

Advertisement

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಡೆದ ಬಸವ ಜಯಂತಿ, ಡಾ.ಶಿವಕುಮಾರ ಸ್ವಾಮೀಜಿರವರ ಜಯಂತ್ಯುತ್ಸವ, ಬಸವ ಪುತ್ಥಳಿ ಅನಾವರಣ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಮುಂದಿನ ಪೀಳಿಗೆಗಾಗಿ ಸಮಾನತೆಯ ರಾಷ್ಟ್ರ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು, ಈ ನಿಟ್ಟಿನಲ್ಲಿ ಮಠ ಮಾನ್ಯಗಳು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

ಬಸವಣ್ಣನವರ ಆದರ್ಶ ಮೈಗೂಡಿಸಿಕೊಳ್ಳಿ: ಬಸವಣ್ಣನವರು ಸೇರಿದಂತೆ ಸಮಾಜ ಸುಧಾರಕರಗಳ ಜಯಂತಿಗಳ ಆಚರಣೆ ಮಾಡುವ ಉದ್ದೇಶ ಅವರ ತತ್ವಾದರ್ಶಗಳನ್ನು ಸಮಾಜ ಹಾಗೂ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುವುದು. ಹಾಗಾಗಿ ಎಲ್ಲರೂ ಅವುಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದ ಈಶ್ವರಖಂಡ್ರೆ ಯುವ ಜನತೆ ಉತ್ತಮ ಸಂಸ್ಕಾರ
ಕಲಿಯುವುದರ ಜತೆಗೆ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಕೊಳ್ಳಬೇಕು ಎಂದರು.

ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠಾಧೀಶರಾದ ಸಿದ್ದಲಿಂಗಮಹಾಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಮಹಾಂತಶಿವಯೋಗಿಸ್ವಾಮಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಬೆಟ್ಟದಪುರ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುರುಘ ಮಠದ ಮೋಕ್ಷಪತಿಸ್ವಾಮೀಜಿ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಅರಕೆರೆ ರಕ್ತ ಮಠದ ಸಿದ್ದೇಶ್ವರಸ್ವಾಮೀಜಿ, ಗುರುಮಲ್ಲೇಶ್ವರ ಮಠದ ಜಯದೇತಾಯಿ, ಕಲ್ಯಾಣ ಬಸವೇಶ್ವರ ಮಠದ ಚಿನ್ಮಯಿತಾಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

Advertisement

ಒಕ್ಕೂಟದ ಅಧ್ಯಕ್ಷ ಎಲ್‌.ಪಿ.ರವಿಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಒಕ್ಕೂಟದಿಂದ ಸನ್ಮಾನಿಸ ಲಾಯಿತು. ಶಾಸಕ ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಎಸ್‌.ತೋಂಟ ದಾರ್ಯ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌.ಚನ್ನಬಸಪ್ಪ, ಕೆಎಎಸ್‌ ಅಧಿಕಾರಿ ಡಾ.ಡಿ.ಬಿ.ನಟೇಶ್‌, ಮಾರ್ಬಳ್ಳಿ ಮೂರ್ತಿ, ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್‌, ಸದಸ್ಯರಾದ ಕೆ.ಬಿ.ವೀಣಾ, ಮಂಜುಳಚಿಕ್ಕವೀರು, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮುಖಂಡರಾದ ಗುರುಪಾದಸ್ವಾಮಿ, ಸಿ.ಪಿ. ರಮೇಶ್‌, ಕಾನ್ಯಶಿವ ಮೂರ್ತಿ, ಚಂದ್ರ ಶೇಖರ್‌, ಕೆ.ಸಿ.ಶಿವ ಕುಮಾರ್‌, ಕೆಡಗನಟರಾಜು, ರಾಜ ಶೇಖರ್‌, ಧರ್ಮಮಂಜು ನಾಥ್‌, ತಾರಾ , ಡಾ.ಸಣ್ಣಲಿಂಗಪ್ಪ, ರೇಖಾ, ಮನೋಹರಿ, ದ್ರಾಕ್ಷಾಯಣಿ, ಕೆ.ವಿ.ಮಹೇಶ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next