Advertisement

ಮನುಷ್ಯನನ್ನು ಮೃಗವಾಗಿಸಿದೆ ಜಾತಿ

12:56 PM Oct 12, 2021 | Shwetha M |

ಹೂವಿನಹಿಪ್ಪರಗಿ: ಕವಿ ಕಾವ್ಯವೆನ್ನುವುದು ಮನುಷ್ಯ ಹುಟ್ಟಿನಿಂದಲೂ ಬಂದಿದೆ. ಜಾತಿ ಎನ್ನುವುದು ಮನುಷ್ಯನನ್ನು ಮೃಗವನ್ನಾಗಿ ಮಾಡುತ್ತಿರುವುದು ವಿಷಾದಕರ ಸಂಗತಿ. ಜಾತಿ, ಮೌಡ್ಯವನ್ನು ಹೊಡೆದೋಡಿಸಲು ಕೇಂದ್ರ ಸಾಹಿತ್ಯ ವೇದಿಕೆ ಹುಟ್ಟಿಕೊಂಡಿದೆ ಎಂದು ಬೆಂಗಳೂರಿನ ಖ್ಯಾತ ಸಾಹಿತಿ ಬಿ.ಟಿ. ಲಲಿತಾನಾಯಕ ಹೇಳಿದರು.

Advertisement

ಸ್ಥಳೀಯ ವಿಶ್ವಚೇತನ ಪ್ರೌಢ ಶಾಲಾ ಆವರಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬಸವನಬಾಗೇವಾಡಿ ತಾಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಖೀಲ ಕರ್ನಾಟಕ ತೃತೀಯ ಕವಿ ಕಾವ್ಯ ಸಮ್ಮೇಳನ ಹಾಗೂ ಹೂವಿನಹಿಪ್ಪರಗಿ ವಲಯ ಘಟಕ ಉದ್ಘಾಟಿಸಿ ಮಾತನಾಡಿದರು.

ಯುದ್ಧವನ್ನು ಪ್ರೀತಿಸುವ ಜನರು ಇದ್ದಾರೆ, ಆದರೆ ಯುದ್ಧ ಮಾಡುವುದ್ದರಿಂದ ಅನೇಕ ಮುಗ್ಧ ಜನರು ಬಲಿಯಾಗುತ್ತಾರೆ ಇದು ಮಾನವೀಯತೆ ಅಲ್ಲ. ಅವುಗಳನ್ನು ದೂರು ಮಾಡುವ ಜನರು ಮುಂದೆ ಬಂದಾಗ ರಾಷ್ಟ್ರದ ಜನರು ಶಾಂತಪ್ರೀಯಾರಾಗಿ ಬದುಕಲು ಸಾಧ್ಯವೆಂದು ಹೇಳಿದರು.

ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಮಾತನಾಡಿ, ಸಾಹಿತಿಗಳಿಗೆ ಸಾಹಿತ್ಯ ಸಮ್ಮೇಳನಗಳು ಸ್ಪೂರ್ತಿದಾಯಕವಾಗಿದ್ದು ಸಾಹಿತ್ಯಗಳನ್ನು ಓದುವುದ್ದರಿಂದ ಕವಿಗಳ ಭಾವನೆಯನ್ನು ಅರಿತುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಇಂದಿನ ಯುವಸಮೂಹ ಮೊಬೈಲ್‌ನಲ್ಲಿ ತಲ್ಲಿನರಾಗದೆ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿಕೊಂಡು ನಾಡಿನ ಹೆಸರು ತರಬೇಕು ಎಂದು ಹೇಳಿದರು.

ಇದನ್ನೂ ಓದಿ: ಆರ್ ಎಸ್ ಎಸ್ ವಿರುದ್ಧ 1977ರಿಂದಲೂ ನಾನು ಮಾತನಾಡುತ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ

Advertisement

ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್‌ ಧುರೀಣ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಡಾ| ಎಂ.ಜಿ. ದೇಶಪಾಂಡೆ, ಸಮ್ಮೇಳನಾಧ್ಯಕ್ಷೆ ಡಾ| ವಸುಂಧರ ಭೂಪತಿ, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ, ಡಾ| ಸುಪ್ರೀತಾ ಲಗಳಿ, ವೇದಿಕೆ ಉಪಾಧ್ಯಕ್ಷೆ ಶಾಲಿನಿ ರುದ್ರಮುನಿ ಸೇರಿದಂತೆ ಇತರರು ಮಾತನಾಡಿದರು.

ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ, ಧಾರವಾಡದ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಸರಸ್ವತಿ ಚಿಮ್ಮಲಗಿ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಗುಂಡಾನವರ, ಗುತ್ತಿಗೆದಾರ ಶರಣು ಆಲೂರ, ಸುರೇಶ ಚಿಮ್ಮಲಗಿ, ವೇದಿಕೆ ಜಿಲ್ಲಾಧ್ಯಕ್ಷ ಮುರುಗೇಶ ಸಂಗಮ, ತಾಲೂಕಾಧ್ಯಕ್ಷ ಮಾಧವ ಗುಡಿ, ಗ್ರಾಪಂ ಸದಸ್ಯೆ ಅನಿತಾ ಬ್ಯಾಕೋಡ ಇದ್ದರು. ಶ್ರವಣ ರಾಜನಾಳ ಪ್ರಾರ್ಥಿಸಿದರು. ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ, ಆರ್‌ಎಂಎಸ್‌ನ ಅಧ್ಯಾಪಕಿ ಸವಿತಾ ಹಡಲಗೇರಿ ನಿರೂಪಿಸಿದರು. ರಾಜ್ಯ ಸಂಚಾಲಕ ಜಿಲ್ಲಾ ಉಸ್ತುವಾರಿ ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡಮನಿ ವಾರ್ಷಿಕ ವರದಿ ವಾಚಿಸಿದರು. ವೇದಿಕೆ ರಾಜ್ಯ ಸಂಚಾಲಕ ರಾಮಕೃಷ್ಣ ಶಿರೂರ ವಂದಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೇದಿಕೆಯಿಂದ ಭುವನೇಶ್ವರಿದೇವಿ ಬಸವಜನ್ಮ ಸ್ಮಾರಕ, ಸಮ್ಮೇಳನದ ಸ್ತಬ್ಧ ಚಿತ್ರಗಳ ಮೆರವಣಿಗೆ, ವಿದ್ಯಾರ್ಥಿಗಳಿಂದ ಕೋಲಾಟ, ಡೊಳ್ಳು ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಂತರ ಕವಿಗೋಷ್ಠಿ, ಶಿಕ್ಷಕ ಭೂಷಣ ಪ್ರದಾನ ಸಮಾರಂಭ, ಶ್ರಾವಣ ಸಿರಿ ಕಾರ್ಯಕ್ರಮದ ಉಪಾನ್ಯಾಸಕರಿಗೆ ಗೌರವ ಸನ್ಮಾನ, ಸಾಹಿತ್ಯ ಕಂಕಣ ಪಾಕ್ಷಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆದವು

Advertisement

Udayavani is now on Telegram. Click here to join our channel and stay updated with the latest news.

Next