Advertisement

ಅಮೆರಿಕದ ಸಿಯಾಟಲ್‌ನಲ್ಲಿ ಜಾತಿ ತಾರತಮ್ಯ ನಿಷೇಧ

08:11 PM Mar 28, 2023 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಜಾತಿ ತಾರತಮ್ಯವನ್ನು 1948ರಲ್ಲೇ ನಿಷೇಧಿಸಲಾಗಿದೆ. ಈಗ ಅಮೆರಿಕದ ಸಿಯಾಟಲ್‌ ಇಂಥದ್ದೊಂದು ಕ್ರಮ ತೆಗೆದುಕೊಂಡ ಜಗತ್ತಿನ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಸಿಯಾಟಲ್‌ ಪಾಲಿಕೆ ಸದಸ್ಯೆ, ಭಾರತೀಯ ಮೂಲದ ಕ್ಷಮಾ ಸಾವಂತ್‌ ಈ ನಿರ್ಣಯ ಮಂಡಿಸಿದ್ದು, ಅವಿರೋಧವಾಗಿ ಅನುಮೋದನೆ ಪಡೆದಿದೆ. ಉದ್ಯಮಗಳಲ್ಲಿ, ಮನೆ ಬಾಡಿಗೆ ನೀಡುವಾಗ, ಇತರೆ ಯಾವುದೇ ಸಾರ್ವಜನಿಕ ಕೇಂದ್ರಗಳಲ್ಲಿ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಆ ನಗರದಲ್ಲಿ ನಿಷೇಧಿಸಲಾಗಿದೆ.

ಇನ್ನೊಂದು ಕಡೆ ಈ ನಿರ್ಣಯ ಅಮೆರಿಕದ ಹಿಂದೂ ಸಮುದಾಯದಲ್ಲಿ ಭೀತಿಯನ್ನೂ ಹುಟ್ಟಿಸಿದೆ.

ಇತ್ತೀಚೆಗೆ ಅಮೆರಿಕದಲ್ಲಿ ಶಿವಾಜಿ, ಮಹಾತ್ಮ ಗಾಂಧಿಯ ವಿಗ್ರಹಗಳು, ಹಿಂದೂ ದೇವಾಲಯಗಳನ್ನು ಧ್ವಂಸ ಪ್ರಕರಣಗಳು ಹೆಚ್ಚುತ್ತಿವೆ. ಈ ನಿರ್ಣಯದಿಂದ ಈ ಪ್ರಕರಣಗಳು ಹೆಚ್ಚಬಹುದು ಎಂಬ ಭೀತಿ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next