Advertisement

ಬಿಹಾರದಲ್ಲಿ ಜಾತಿ ಗಣತಿಯ ಮಾಸ್ಟರ್‌ ಸ್ಟ್ರೋಕ್‌

11:24 PM Jun 02, 2022 | Team Udayavani |

ದೇಶದಲ್ಲಿ ಜಾತಿ ಗಣತಿ ನಡೆಯಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ. ಆದರೆ ಬಿಹಾರದಲ್ಲಿ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಸರಕಾರ ಜಾತಿ ಗಣತಿ ನಡೆಸಲು ಮುಂದಾಗಿದೆ. ಈ ಬೆಳವಣಿಗೆ ಬಿಜೆಪಿ, ಜೆಡಿಯು ನಡುವಿನ ವಿರಸದ ಒಂದು ಭಾಗವೇ. ಸಿಎಂ ನಿರ್ಧಾರಕ್ಕೆ ಪ್ರಧಾನ ವಿಪಕ್ಷ ಆರ್‌ಜೆಡಿ ಬೆಂಬಲ ನೀಡಿದೆ ಎನ್ನುವುದು ಮಹತ್ವದ್ದು.

Advertisement

ಸರ್ವಪಕ್ಷಗಳ ಸಭೆಯಲ್ಲಿ ನಿರ್ಧಾರ
ಮೇ 27ರಂದು ಪಾಟ್ನಾದಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜಾತಿಗಣತಿ ಬಗ್ಗೆ ನಿರ್ಧ ರಿಸಲಾಗಿತ್ತು. ಜತೆಗೆ ಬುಧವಾರ ಮತ್ತೂಮ್ಮೆ ನಡೆದಿದ್ದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. “ನಾವು ಜಾತಿ ಆಧಾರಿತ ಗಣತಿಯನ್ನು ಕೈಗೊಳ್ಳಲಿದ್ದೇವೆ. ಇದು ಸಾಂಪ್ರದಾಯಿಕ ಜನಗಣತಿ ಅಲ್ಲ’ ಎನ್ನುವುದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದರು.

ತಿರಸ್ಕೃತಗೊಂಡಿತ್ತು ಬೇಡಿಕೆ
ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಸರ್ವಪಕ್ಷ ನಿಯೋಗ ಜಾತಿ ಆಧಾರಿತ ಗಣತಿ ನಡೆಸುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರಕಾರ ಅದನ್ನು ಒಪ್ಪಿರಲಿಲ್ಲ.

ಬಿಜೆಪಿ ನಿಲುವು ಏನು?
ಜಾತಿ ಆಧಾರಿತ ಗಣತಿ ಬಗ್ಗೆ ಆರಂಭದಲ್ಲಿ ಬಿಜೆಪಿ ಮುಕ್ತ ಮನಸ್ಸು ಹೊಂದಿರಲಿಲ್ಲ ಮತ್ತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ವಿರೋಧಿಸಿದರೆ ಪ್ರತಿಕೂಲ ಪರಿಣಾಮ ಉಂಟಾಗಹುದು ಎಂಬ ಆತಂಕ ಅದಕ್ಕೆ. ಬುಧವಾರದ ಸಭೆಯಲ್ಲಿ ಬಿಜೆಪಿ, ಆರ್‌ಜೆಡಿ, ಕಾಂಗ್ರೆಸ್‌, ಸಿಪಿಐಎಂಎಲ್‌, ಸಿಪಿಎಂ, ಸಿಪಿಐ, ಎಐಎಂಐಎಂ ಮತ್ತು ಎಚ್‌ಎಎಂ ಪಕ್ಷಗಳ ಪ್ರತಿನಿಧಿಗಳು ಇದ್ದರು.

ರಾಜಕೀಯವಾಗಿ ಮಹತ್ವ
ಬಿಹಾರದ ರಾಜಕೀಯದಲ್ಲಿ ಒಬಿಸಿ ಸಮುದಾಯದವರೇ ಪ್ರಧಾನ ಪಾತ್ರ ವಹಿಸುತ್ತಾರೆ. ಹೀಗಾಗಿ ಮುಖ್ಯಮಂತ್ರಿ ನಿತೀಶ್‌ ಅತ್ಯಂತ ನಾಜೂಕಾಗಿ, ಸೂಕ್ಷ್ಮ ದಾಳ ಉರುಳಿ ಸಿದ್ದಾರೆ. 2025ರ ವಿಧಾನಸಭೆ ಚುನಾವಣೆ ಮತ್ತು 2024 ಲೋಕಸಭೆ ಚುನಾವಣೆಯಲ್ಲಿ ಇದು ಪ್ರಧಾನವಾಗಿ ಪರಿಣಮಿಸಲಿದೆ.

Advertisement

ರಾಜ್ಯ ಸರಕಾರ ಮಾಡಬಹುದೇ?
ಜನಗಣತಿಯನ್ನು ಕೇಂದ್ರ ಸರಕಾರವೇ ಮಾಡಬೇಕು. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಗೃಹ ಸಚಿವಾಲಯ ಮಾಡುತ್ತದೆ ಮತ್ತು ಅದು ಕೇಂದ್ರೀಯ ಪಟ್ಟಿಯಲ್ಲಿದೆ. ಈ ಕಾರಣಕ್ಕಾಗಿಯೇ ಬಿಹಾರ ಸರಕಾರ ಜಾತಿ ಆಧಾರಿತ ಗಣತಿ ಎಂದು ಹೆಸರಿಸಲು ತೀರ್ಮಾನಿಸಿದೆ. 2019ರ ಫೆ.18 ಮತ್ತು 2020ರ ಫೆ. 27ರಂದು ಬಿಹಾರ ವಿಧಾನಸಭೆಯಲ್ಲಿ ಜಾತಿ ಗಣತಿ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.

ಗಣತಿಯ ಇತಿಹಾಸ
ದೇಶದಲ್ಲಿ ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ ಅಂದರೆ 1872ರಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಬಿಹಾರಕ್ಕೆ ಸಂಬಂಧಿಸಿದಂತೆ 1931ರಲ್ಲಿ ಕೊನೆಯ ಜಾತಿ ಗಣತಿ ನಡೆದಿತ್ತು.

ಇತರ ರಾಜ್ಯಗಳಲ್ಲಿ
ಕರ್ನಾಟಕ, ಒಡಿಶಾಗಳಲ್ಲಿ ಕೂಡ ಜಾತಿ ಗಣತಿ ಮಾದರಿಯಲ್ಲಿಯೇ ಸಮೀಕ್ಷೆಗಳು ನಡೆದಿದ್ದವು. ಆದರೆ ಅದಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಎಂಬ ಶೀರ್ಷಿಕೆ ಕೊಡಲಾಗಿತ್ತು. ಕರ್ನಾಟಕದಲ್ಲಿ ನಡೆಸಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next