Advertisement

ವಿಶೇಷ ಪ್ಯಾಕೇಜ್‌ ಘೋಷಣೆಗೆ ಕಾಸಿಯಾ ಆಗ್ರಹ

09:58 AM May 09, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಸಾಮಾನ್ಯ ಸ್ಥಿತಿಗೆ ಮರಳದಿದ್ದರೆ ಗಣನೀಯ ಸಂಖ್ಯೆಯ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಸ್‌ಎಂಇ ಪುನಶ್ಚೇತನಕ್ಕೆ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಿಸಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಆರ್‌.ರಾಜು ಒತ್ತಾಯಿಸಿದರು.

Advertisement

ನಗರದಲ್ಲಿ ಶುಕ್ರವಾರ ಜೂಮ್‌ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6.5 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದು
(ಎಂಎಸ್‌ಎಂಇ) 70 ಲಕ್ಷ ಕಾರ್ಮಿಕರು ಅವಲಂಬಿತರಾಗಿದ್ದಾರೆ. ಸಣ್ಣ ಉದ್ಯಮಗಳು ಸಹಜ ಸ್ಥಿತಿಗೆ ಮರಳದಿದ್ದರೆ ಸಾಕಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಸಣ್ಣ ಉದ್ಯಮಗಳು ತಮ್ಮ ಸಾಮರ್ಥಯದ ಶೇ.50ರಷ್ಟು ಉತ್ಪಾದನೆ ಆರಂಭಿಸಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಶೇ.25 ರಿಂದ ಶೇ. 30ರಷ್ಟು ಕೈಗಾರಿಕೆಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಶೇ. 30ರಿಂದ ಶೇ.35ರಷ್ಟು ಕೈಗಾರಿಕೆಗಳು ಆರ್ಥಿಕ ಕೊರತೆ ಎದುರಿಸುತ್ತಿವೆ ಎಂದರು. ಪುನಶ್ಚೇತನದ ಸಹಾಯಧನ ಸರ್ಕಾರವು ಜಿಎಸ್‌ಟಿ ಹಾಗೂ ನೇರ ತೆರಿಗೆ ಸಮಸ್ಯೆಗಳನ್ನು ಬಗೆಹರಿ ಸುವುದರೊಂದಿಗೆ ಎಸ್‌ಎಂಇ ವಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಹಾಗೂ ಬಾಕಿ ಇರುವ ಪರಿಹಾರಗಳನ್ನು ಒದಗಿಸಬೇಕು ಎಂದು ಕೋರಿದರು. ಎಸ್‌ಎಂಇಗೆ ನೀಡುವ ಪ್ಯಾಕೇಜ್‌ ಕೃಷಿ ವಲಯಕ್ಕೆ ನೀಡುವ ಪ್ಯಾಕೇಜ್‌ಗೆ ಅನುಗುಣವಾಗಿರಬೇಕು. ಆಂಧ್ರಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹರಿಯಾಣ ಹಾಗೂ ತೆಲಂಗಾಣ ಸರ್ಕಾರಗಳು ಎಸ್‌ಎಂಇ ಚೇತರಿಕೆಗೆ ಹಲವು ಪ್ಯಾಕೇಜ್‌ ಘೋಷಿಸಿವೆ. ರಾಜ್ಯದಲ್ಲೂ ಇದೇ ರೀತಿಯ ಪರಿಹಾರ ಘೋಷಿಸಬೇಕೆಂದು ಮನವಿ ಮಾಡಿದರು. ಕಾಸಿಯಾ ಖಜಾಂಚಿ ಎಚ್‌.ಎಂ. ಹುಸೇನ್‌, ಗೌರವ ಕಾರ್ಯದರ್ಶಿ ರಾಜಗೋಪಾಲ್‌ ಇತರರಿದ್ದರು.

ರಾಜ್ಯ ಸರ್ಕಾರಕ್ಕೆ ಅಭಿನಂದನೆ
ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಕೈಗೊಂಡಿರುವ ಸಕಾರಾತ್ಮಕ ಕ್ರಮಗಳು ಸ್ವಾಗತಾರ್ಹ. ಎಂಎಸ್‌ಎಂಇ ವಿದ್ಯುತ್‌ ಬಿಲ್‌ನ ಮಾಸಿಕ ನಿಗದಿತ ಶುಲ್ಕ ಎರಡು ತಿಂಗಳ ಅವಧಿಗೆ ಮನ್ನಾ. ವಿಳಂಬ ಬಿಲ್‌ ಪಾವತಿ ಮೊತ್ತದ ಮೇಲಿನ ಬಡ್ಡಿ ಕಡಿತ. ಬಾಕಿ ಮೊತ್ತ ಕಂತಿನಲ್ಲಿ ಪಾವತಿಗೆ ಅವಕಾಶ ನೀಡಿರುವುದು ಉಪಯುಕ್ತವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಜಗದೀಶ ಶೆಟ್ಟರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಕಾಸಿಯಾ
ಅಧ್ಯಕ್ಷ ಆರ್‌.ರಾಜು ತಿಳಿಸಿದರು.

ವಿವಿಧ ಬೇಡಿಕೆಗಳು
􀂄 ಓವರ್‌ ಡ್ರಾಫ್ಟ್‌ ಖಾತೆಗಳ ಮೇಲಿನ ಬಡ್ಡಿಯನ್ನು ಮೂರು ತಿಂಗಳ ಅವಧಿಗೆ ಮನ್ನಾ ಮಾಡಬೇಕು
􀂄 ಕಾರ್ಮಿಕರಿಗೆ ಮೂರು ತಿಂಗಳ ವೇತನ ಪಾವತಿಗೆ ಸಹಾಯಧನ ನೀಡಬೇಕು
􀂄 ಎಸ್‌ಎಂಇ ವಲಯಕ್ಕೆ ಸದ್ಯ ಇರುವ ಓ.ಡಿ. ಮೇಲೆ ತಾತ್ಕಾಲಿಕವಾಗಿ ಶೇ. 40ರಷ್ಟು ಓ.ಡಿ.ಯನ್ನು ರಿಯಾಯ್ತಿ ಬಡ್ಡಿ ದರದಲ್ಲಿ ನೀಡಬೇಕು
􀂄 ಓ.ಡಿ/ ಸಿ.ಸಿ ಖಾತೆಗಳಿಗೆ ರಿಯಾಯ್ತಿ ದರದಲ್ಲಿ ಬಡ್ಡಿ ವಿಧಿಸುವಿಕೆ
􀂄 ಕಾರ್ಮಿಕರ ‌ ರಾಜ್ಯ ವಿಮೆಯಲ್ಲಿ (ಇಎಸ್‌ಐ) 85,000 ಕೋಟಿ ರೂ. ಹಾಗೂ ಭವಿಷ್ಯ ನಿಧ (ಪಿಎಫ್‌)ಯಲ್ಲಿ 45,000 ಕೋಟಿ ರೂ.ನಷ್ಟು ಆವರ್ತ ನಿಧಿಯಿದ್ದು, ಈ ನಿಧಿಯ ಮೊತ್ತ ಬಳಸಿಕೊಂಡು ಎಸ್‌ಎಂಇಗಳಿಗೆ ಆರ್ಥಿಕ ನೆರವು ನೀಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next