Advertisement

Cashew: ಕ್ಯಾಂಪ್ಕೋದಿಂದ ಗೋಡಂಬಿ ಖರೀದಿಗೂ ಚಿಂತನೆ: ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ

12:24 AM Sep 02, 2024 | Team Udayavani |

ಮಂಗಳೂರು: ಕ್ಯಾಂಪ್ಕೊ ಕಳೆದ ಸಾಲಿನಲ್ಲಿ 3,336.87 ಕೋ. ರೂ. ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿ 5.99 ಕೋ. ರೂ.ನಿವ್ವಳ ಲಾಭ ಗಳಿಸಿದ್ದು, ಇನ್ನು ಮುಂದೆ ಗೋಡಂಬಿ ಖರೀದಿಗೂ ಚಿಂತನೆ ನಡೆಸಿದೆ.

Advertisement

ಮಂಗಳೂರು ಹೊರವಲಯದಲ್ಲಿ ಶನಿವಾರ ಜರಗಿದ ಸಂಸ್ಥೆಯ 50ನೇ ವಾರ್ಷಿಕ ಮಹಾಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ.
ಅಡಿಕೆ, ಕಾಳುಮೆಣಸು, ಕೋಕೋ ವನ್ನು ಪ್ರಸ್ತುತ ಖರೀದಿಸುತ್ತಿರುವ ಸಂಸ್ಥೆಯು ಅವಶ್ಯವಾದರೆ ಗೋಡಂಬಿ ಖರೀದಿಸಲಿದೆ. ಆಡಳಿತ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮಾಹಿತಿ ನೀಡಿದ್ದಾರೆ.

ಮುಂದಿನ 25 ವರ್ಷಗಳ ಯೋಜನೆಯನ್ನು ದೃಷ್ಟಿಯಲ್ಲಿರಿಸಿ ಪುತ್ತೂರಿನ ಸಂಸ್ಥೆಯ ಚಾಕೊಲೇಟ್‌ ಫ್ಯಾಕ್ಟರಿ ಬಳಿ ನಾಲ್ಕೂವರೆ ಎಕ್ರೆ ಜಾಗವನ್ನು ಖರೀದಿಸಲು ನಿರ್ಧರಿಸಲಾಗಿದೆ. ವಿಟ್ಲ ಶಾಖೆ ಹೊಸದಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಸಂಸ್ಥೆಯ ಸುಪರ್ದಿಯಲ್ಲೇ ಕಾವುನಲ್ಲಿ ಎಚ್‌ಪಿಸಿಎಲ್‌ ವತಿಯಿಂದ ಹೊಸ ಪೆಟ್ರೋಲ್‌ ಬಂಕ್‌ ನಿರ್ಮಿಸಲು ಚಿಂತಿಸಲಾಗಿದೆ.

ವಿದೇಶಿ ಅಡಿಕೆಯ ಅಕ್ರಮ ಆಮದಿನಿಂದ ದೇಶೀಯ ಮಾರು ಕಟ್ಟೆಯಲ್ಲಿ ಅಡಿಕೆ ಧಾರಣೆ ಮೇಲೆ ಪ್ರಭಾವ ಬೀರಿದರೂ ಪರಿಣಾಮ ಕಾರಿ ಕಾರ್ಯತಂತ್ರಗಳ ಮೂಲಕ ಕೈಗೊಂಡ ತೀರ್ಮಾನದಿಂದ ಅಂತಿಮ ತ್ತೈಮಾಸಿಕ ಅವಧಿಯಲ್ಲಿ ಉತ್ತಮ ಸಾಧನೆ ಸಾಧ್ಯ ವಾಯಿತು ಎಂದು ತಿಳಿಸಿದರು.

ಅಡಿಕೆಯನ್ನು ಹಾನಿಕಾರಕ ಪಟ್ಟಿ ಯಿಂದ ತೆಗೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆಗೆ ವೈಜ್ಞಾನಿಕ ಸಂಶೋಧನೆ ವರದಿ ಸಲ್ಲಿಸಿ ಮನವರಿಕೆ ಮಾಡುವ ಪ್ರಯತ್ನವನ್ನು ಕ್ಯಾಂಪ್ಕೊ ಮುಂದಿನ ತಿಂಗಳು ಮಾಡಲಿದೆ.

Advertisement

ಗ್ರಾಹಕರಿಗೆ ಕೃಷಿ ಮಾರುಕಟ್ಟೆಯ ಆಗುಹೋಗುಗಳನ್ನು ಸುಲಭವಾಗಿ ತಲುಪಿಸಲು ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲು ನಿರ್ಧ ರಿಸಲಾಗಿದೆ. ಅಡಿಕೆ ಹಾಗೂ ಇತರ ಉತ್ಪನ್ನಗಳ ಧಾರಣೆ ಸಹಿತ ಎಲ್ಲ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಾಗಲಿದೆ.
ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ, ನಿರ್ದೇಶಕರಾದ ಎಸ್‌.ಆರ್‌.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್‌ ಮಡ್ತಿಲ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next