Advertisement

ಉಳಿತಾಯ ಖಾತೆ ಡ್ರಾ ಮಿತಿ 50ಸಾವಿರಕ್ಕೆ ಏರಿಕೆ; ಆರ್ ಬಿಐ

02:56 PM Feb 20, 2017 | |

ನವದೆಹಲಿ:500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಸಾರ್ವಜನಿಕ ವಲಯದಲ್ಲಿ ಉಂಟಾದ ತೊಂದರೆಯನ್ನು ತಪ್ಪಿಸಲು ಹಂತ, ಹಂತವಾಗಿ ಕ್ರಮ ಕೈಗೊಂಡಿರುವ ಆರ್ ಬಿಐ ಇದೀಗ ಉಳಿತಾಯ ಖಾತೆಯಿಂದ ವಾರಕ್ಕೆ 50 ಸಾವಿರ ರೂಪಾಯಿ ನಗದು ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

Advertisement

ಆರ್ ಬಿಐ ಪ್ರಕಟಣೆ ಪ್ರಕಾರ, ಉಳಿತಾಯ ಖಾತೆಯಿಂದ ಈವರೆಗೆ ವಾರಕ್ಕೆ 24 ಸಾವಿರ ರೂಪಾಯಿ ನಗದು ತೆಗೆಯಲು ಮಿತಿ ಇತ್ತು. ಫೆಬ್ರುವರಿ 20ರಿಂದ 24ಸಾವಿರ ರೂಪಾಯಿಯಿಂದ 50 ಸಾವಿರಕ್ಕೆ ಮಿತಿ ನಿಗದಿಪಡಿಸಿರುವುದಾಗಿ ಹೇಳಿದೆ.

ಮಾರ್ಚ್ 13ರಿಂದ ಉಳಿತಾಯ ಖಾತೆಯಿಂದ ನಗದು ಪಡೆಯಲು ಯಾವುದೇ ಮಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next