Advertisement

1 ಕೋಟಿಗಿಂತ ಕಡಿಮೆ ಮೌಲ್ಯದ ಕೇಸ್‌ ವಜಾ

06:04 AM Oct 07, 2018 | |

ಹೊಸದಿಲ್ಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿಯ ಇತ್ತೀಚಿನ ಸುತ್ತೋಲೆಯನ್ನು ಆಧರಿಸಿ 1 ಕೋಟಿ ರೂ. ಗಿಂತ ಕಡಿಮೆ ಮೌಲ್ಯದ ಆದಾಯ ತೆರಿಗೆ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಬಿಟ್ಟಿದೆ.

Advertisement

ಸುಮಾರು 200 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲಾಗಿದ್ದು, ಇದರಿಂದಾಗಿ ಹೆಚ್ಚು ಮೊತ್ತದ ಆದಾಯ ತೆರಿಗೆ ವಿವಾದಗಳತ್ತ ಸಿಬಿಡಿಟಿ ಗಮನ ಹರಿಸಲು ಅನುಕೂಲವಾಗಲಿದೆ. ಕಳೆದ ಜುಲೈನಲ್ಲಿ ಈ ಸಂಬಂಧ ಸಿಬಿಡಿಟಿ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ವಜಾಗೊಳಿಸಿದ ಎಲ್ಲ ಪ್ರಕರಣಗಳಿಗೂ ತೆರಿಗೆ ಆದಾಯದ ಮಿತಿ ಮತ್ತು ಸಿಬಿಡಿಟಿ ಸುತ್ತೋಲೆಯನ್ನು ಉಲ್ಲೇಖೀಸಲಾಗಿದ್ದು, ಈ ಪ್ರಕರಣಗಳನ್ನು ಸಿಬಿಡಿಟಿಯೇ ಪರಿಹರಿಸಲಿದೆ. ಆದರೆ ಕಪ್ಪು ಹಣ ಅಥವಾ ವಿದೇಶದಲ್ಲಿ ಹಣ ಸಂಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು 1 ಕೋಟಿ ರೂ.ಗಿಂತ ಕಡಿಮೆ ಇದ್ದರೂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next