Advertisement

ಕೊರಟಗೆರೆ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

06:22 PM Aug 25, 2022 | Team Udayavani |

ಕೊರಟಗೆರೆ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ದೈಹಿಕವಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಯುವಕನೋರ್ವನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೌರಿಬಿದನೂರು ತಾಲೂಕಿನ ಕದರನಹಳ್ಳಿ ಗ್ರಾಮದ  ನಿವಾಸಿ ಪುಟ್ಟನಂಜ ವಿರುದ್ದ ಪ್ರಕರಣ ದಾಖಲು.

ಕೊರಟಗೆರೆ ತಾಲೂಕಿನ ಕಳ್ಳಿಪಾಳ್ಯ ಗ್ರಾಮದ ಬಾಲಕಿಯ ಅಣ್ಣನ ಸ್ನೇಹಿತನಾಗಿದ್ದು, ಈ ಬಾಲಕಿಯನ್ನು ದೂರವಾಣಿ ಮುಖಾಂತರ ಸಂಪರ್ಕ ಸಾಧಿಸಿ ಪ್ರೇಮಾಂಕುರ ಆಗಿರುವುದಾಗಿ ಹೇಳಿದ್ದಾನೆ. ಆದರೆ ಆ ಬಾಲಕಿ ನನಗೆ ಇನ್ನೂ 18 ವರ್ಷಗಳು ತುಂಬಿರುವುದಿಲ್ಲ. ಅಪ್ರಾಪ್ತ ವಯಸ್ಕಳಾಗಿದ್ದೇನೆ ಎಂದು ಹೇಳಿದರೂ ವಯಸ್ಕಳಾದ ನಂತರ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಹಲವು ಬಾರಿ ಬಳಸಿಕೊಂಡಿದ್ದಾನೆ. ಆನಂತರ ಆ ಹುಡುಗಿ ವಯಸ್ಕಳಾದ ಕೆಲವೇ ದಿನಗಳಲ್ಲಿ ಮತ್ತೊಂದು ಯುವತಿಯನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಮರಳು ಸಾಗಾಟ; ಪೊಲೀಸ್ ದಾಳಿ ವೇಳೆ ಟ್ರ್ಯಾಕ್ಟರ್ ಚಾಲಕ ಪರಾರಿ

ಈ ಹಿನ್ನೆಲೆಯಲ್ಲಿ ಯುವತಿ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next