Advertisement

ಪೊದೆಯಲ್ಲಿ ಕೊಳತ ಶವ ಕೇಸ್ : ಅನೈತಿಕ ಸಂಬಂಧಕ್ಕಾಗಿ ಆತ್ಮಹತ್ಯೆ

09:59 PM Jul 30, 2022 | Team Udayavani |

ಕೊರಟಗೆರೆ: ನಿರ್ಜನ ಪ್ರದೇಶದ ದಟ್ಟ‌ ಪೊದೆಯಲ್ಲಿ ಅನುಮಾನಾಸ್ಪದವಾಗಿ ಕೊಳತ ಸ್ಥಿತಿಯಲ್ಲಿ ಪತ್ತೆಯಾದ ಶಿವಕುಮಾರ್ ಎಂಬಾತನ ಸಾವಿಗೆ ರಣ ರೋಚಕ ತಿರುವು ದೊರಕಿದ್ದು, ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ಹಣಕಾಸಿನ ವ್ಯವಹಾರ ಹಾಗೂ ಅನೈತಿಕ ಸಂಬಂಧವೇ ಕಾರಣ ಎಂದು ಬರೆದಿರುವುದು ಕಂಡು ಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರಕಿದೆ.

Advertisement

ಕೋಳಾಲ ಹೋಬಳಿಯ ತಿಮ್ಮಸಂದ್ರ ಗ್ರಾಮದ ಶಿವಕುಮಾರ್ (47 ) ಕಳೆದ 2 ದಿನಗಳ ಹಿಂದೆ ಇದೇ ಗ್ರಾಮದ ನಿರ್ಜನ ಪ್ರದೇಶದ ಪೊದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಹಿಂದೆ ಹಣಕಾಸಿನ ಬೆದರಿಕೆ ಹಾಗೂ ಮಹಿಳೆಯ ಅನೈತಿಕ ಸಂಬಂಧದ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದೆ.

ಮೃತ ಶಿವಕುಮಾರ್, ತನ್ನೊಂದಿಗೆ ಅನೈತಿಕ ಸಂಬಂಧವಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತನಿಗೆ 1 ಲಕ್ಷ ರೂ ಹಣ ಸಾಲ ಎಂದು ಕೊಡಿಸಲಾಗಿತ್ತು. ಈ ಹಣ ಕೇಳಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದು, ಹಣ-ಬಡ್ಡಿ ಎರಡೂ ಹಿಂದಿರುಗಿಸದೆ ಕೇಳಿದರೆ ನನಗೆ ಬಾಯಿಗೆ ಬಂದಂತೆ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಕಾರಣ ನಾನು ಬೇಸರದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೆ ಶರಣಾದ ಶಿವಕುಮಾರ್ ಕಳೆದ ಸುಮಾರು ವರ್ಷಗಳಿಂದ ಮಹಿಳೆಯ ಕುಟುಂಬಕ್ಕೆ ಆಶ್ರಯವಾಗಿದ್ದು, ಈತನ ಮೊದಲ ಹೆಂಡತಿಯ ಆತ್ಮಹತ್ಯೆಗೆ ಈ ಅನೈತಿಕ ಸಂಬಂಧವೇ ಕಾರಣ ಎನ್ನಲಾಗುತ್ತಿದ್ದು ಈ ಹಿಂದೆ ಸಿಪಿಐ ಕನಕಲಕ್ಷ್ಮಿಯವರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದರು ಎನ್ನಲಾಗಿದ್ದು, ಇವೆಲ್ಲವುಗಳ ನಡುವೆ ಬಹಳ ವರ್ಷಗಳಿಂದ ಜತೆಯಲ್ಲಿದ್ದ ಮಹಿಳೆ ಈಗ ಇನ್ನೊಬ್ಬ ವ್ಯಕ್ತಿಯ ಜತೆ ಹೆಚ್ಚು ಸಲುಗೆಯಿಂದ ಇದ್ದು ನನಗೆ ಮೋಸ ಮಾಡಿದ್ದಾಳೆ, ಆದ್ದರಿಂದ ನನಗೆ ಇವೆರಡೂ ವಿಚಾರಗಳಲ್ಲಿ ಬೇಸರವಾಗಿ ಸಾಲವನ್ನೂ ಹಿಂದಿರುಗಿಸದೆ ಜತೆಗೆ ಪ್ರೀತಿಯಲ್ಲೂ ಮೋಸ ಮಾಡಿದ ಕಾರಣ ನಾನು ಮನನೊಂದು ಆತ್ಮಹತ್ಯೆಗೆ ಕೈ ಹಾಕಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಶಿವಕುಮಾರ್ ಬರೆದಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆಯ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಹಾಲಕ್ಷ್ಮಿಮ್ಮ ಕೂಲಂಕಷವಾಗಿ ಪರಿಶೀಲನೆ ನಡೆಸಿ ಮಹಿಳೆ ಸೇರಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next